ಕಾರವಾರ: ಎರಡು ಬೈಕ್‍ಗಳ ನಡುವೆ ಡಿಕ್ಕಿಯಾಗಿರುವ ಘಟನೆ ನಗರದ ಗ್ಯಾಸ್ ಕಾಲೇಜಿನ ಬಳಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಓರ್ವ ಸವಾರನಿಗೆ ಗಾಯಗಳಾಗಿದ್ರೆ, ಮತ್ತೋರ್ವ ಘಟನೆಯ ಬಳಿಕ ಎಸ್ಕೇಪ್ ಆಗಿದ್ದಾನೆ.
60 ವರ್ಷದ ಗುರುದತ್ ನಾಯ್ಕ್ ಗಾಯಗೊಂಡ ಬೈಕ್ ಸವಾರ. ಗುರುದತ್ ತಮ್ಮ ಬೈಕಿನಲ್ಲಿ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದರು. ಈ ವೇಳೆ ತಮ್ಮ ಬಲಭಾಗದಲ್ಲಿ ಬರುತ್ತಿರುವ ವಾಹನಗಳನ್ನು ಗಮನಿಸದೇ ರಸ್ತೆ ದಾಟುತ್ತಿದ್ದರು. ಇತ್ತ ಬಲಭಾಗದಿಂದ ಬಂದ ಬೈಕ್ ನೇರವಾಗಿ ಗುರುದತ್ತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಓರ್ವ ರಸ್ತೆಯ ಒಂದು ಬದಿಗೆ ಬಂದು ಬಿದ್ದರೂ, ಅದೃಷ್ಟಾವಶ ಬದುಕಿಳಿದಿದ್ದಾರೆ. ಗುರುದತ್ ಪ್ರಜ್ಞೆ ಕಳೆದುಕೊಂಡಿದ್ದರು.
ರಸ್ತೆಯ ಒಂದು ಬದಿಗೆ ಬಿದ್ದಿದ್ದ ಬೈಕ್ ಸವಾರ ಬಂದ ಗುರುದತ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾನೆ. ಅಪಘಾತದ ಬಳಿಕ ಜನರು ಸೇರುತ್ತಿದ್ದಂತೆ ಬೈಕ್ ಸವಾರ ಪರಾರಿಯಾಗಿದ್ದಾನೆ. ಸದ್ಯ ಈ ಘಟನೆ ಸಂಬಂಧ ಕಾರವಾರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.