ಭೋಪಾಲ್: ಕಾರು (Car) ಹಾಗೂ ಬಸ್ (Bus) ನಡುವೆ ಡಿಕ್ಕಿ ಉಂಟಾಗಿ ಭೀಕರ ಅಪಘಾತದಲ್ಲಿ (Accident) 11 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಬೇತುಲ್‌ನಲ್ಲಿ (Betul) ಶುಕ್ರವಾರ ನಸುಕಿನ ವೇಳೆ ನಡೆದಿದೆ.
ಘಟನೆ ಗುಡ್ಗಾಂವ್ ಹಾಗೂ ಭೈಸ್ದೇಹಿ ಪ್ರದೇಶದ ನಡುವೆ ನಡೆದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಧಾವಿಸಿದ್ದಾರೆ. ಗಾಯಗೊಂಡ ಒಬ್ಬ ಪ್ರಯಾಣಿಕನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಇದನ್ನೂ ಓದಿ: ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ: ಸಚಿವೆ ಉಷಾ ಠಾಕೂರ್
ವರದಿಗಳ ಪ್ರಕಾರ ಘಟನೆಯಲ್ಲಿ ಸಾವನ್ನಪ್ಪಿರುವ 11 ಪ್ರಯಾಣಿಕರು ಮಹಾರಾಷ್ಟçದ ಅಮರಾವತಿಯಿಂದ ಹಿಂದಿರುಗುತ್ತಿದ್ದರು. ಘಟನೆ ಮಧ್ಯರಾತ್ರಿ 2 ಗಂಟೆ ವೇಳೆ ನಡೆದಿದೆ. ಕಾರು ಚಾಲಕ ವಾಹನ ಚಲಾಯಿಸುತ್ತಿದ್ದ ವೇಳೆ ನಿದ್ರೆಗೆ ಜಾರಿದ್ದರಿಂದ ಅಪಘಾತ ಉಂಟಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲೂ ಸಂಚಾರ ಆರಂಭಿಸಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್ – ನ.11ಕ್ಕೆ ಮೋದಿ ಚಾಲನೆ
ಭೀಕರ ಘಟನೆಯ ಬಳಿಕ 7 ಶವಗಳನ್ನು ತಕ್ಷಣವೇ ಹೊರತೆಗೆಯಲಾಗಿದೆ. ಉಳಿದ ದೇಹಗಳನ್ನು ಹೊರತೆಗೆಯಲು ನಜ್ಜುಗುಜ್ಜಾದ ವಾಹನದ ಭಾಗಗಳನ್ನು ಬೇರ್ಪಡಿಸಬೇಕಾಯಿತು ಎಂದು ಬೇತುಲ್ ಹಿರಿಯ ಪೊಲೀಸ್ ಅಧಿಕಾರಿ ಸಿಮಲಾ ಪ್ರಸಾದ್ ತಿಳಿಸಿದ್ದಾರೆ.