ಮೈಸೂರು: ಹಣಕ್ಕಾಗಿ ವಿದ್ಯಾರ್ಥಿಗಳನ್ನ ಹೈಜಾಕ್ ಮಾಡೋದನ್ನ ನೋಡಿದ್ದೇವೆ. ಆದ್ರೆ ಕಾಲೇಜಿನ ಹೆಸರಿಗಾಗಿ ಟಾಪರ್ ವಿದ್ಯಾರ್ಥಿಯನ್ನ ಹೈಜಾಕ್ ಮಾಡೋದನ್ನ ಎಲ್ಲಾದ್ರು ನೋಡಿದ್ರಾ? ಇಂತಹದೊಂದು ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಶ್ರೀರಾಂಪುರದ ಚೈತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳನ್ನ, ಪ್ರತಿಷ್ಠೆಗಾಗಿ ವಿದ್ಯಾಶ್ರಮ ಕಾಲೇಜು ಹೈಜಾಕ್ ಮಾಡಿದೆ. ಪಿಯುಸಿ ಪರೀಕ್ಷೆಯಲ್ಲಿ ಮೈಸೂರಿನ ಬೋಗಾದಿಯ ಚೈತ್ರ ಕಾಲೇಜಿನ 3 ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದಿದ್ರು. ಪಿಸಿಎಂಸಿ ವಿಭಾಗದ ವಿದ್ಯಾರ್ಥಿ ಯೋಗೆಂದ್ರ, 582 ಅಂಕ ಪಡೆದ್ರೆ, ರಂಜಿತ್ 580 ಅಂಕ ಪಡೆದಿದ್ದು, ಪರಿಕ್ಷಿತ್ ಬಿ.ವಶಿಷ್ಠ್ ಎಂಬ ವಿದ್ಯಾರ್ಥಿ ಸಂಸ್ಕೃತದಲ್ಲಿ ನೂರಲ್ಲಿ ನೂರು ಅಂಕ ತೆಗೆದಿದ್ರು. ಆದರೆ ಈ ವಿದ್ಯಾರ್ಥಿಗಳು ನಮ್ಮ ಕಾಲೇಜಿನವರು ಎಂದು ಹೇಳಿಕೊಂಡು ಜಯಲಕ್ಷೀಪುರಂನಲ್ಲಿರುವ ವಿದ್ಯಾಶ್ರಮ ಕಾಲೇಜು ಆಡಳಿತ ಮಂಡಳಿ ಪತ್ರಿಕೆಗಳಿಗೆ ಜಾಹಿರಾತು ನೀಡಿದೆ.
Advertisement
ತನ್ನದಲ್ಲದ ವಿದ್ಯಾರ್ಥಿಗಳನ್ನ ತಮ್ಮವರೆಂದು ಹೇಳಿಕೊಳ್ಳುವ ಪ್ರತಿಷ್ಠೆಯ ಕೆಲಸ ವಿದ್ಯಾಶ್ರಮ ಕಾಲೇಜಿಗೆ ಯಾಕೆ ಬೇಕು ಅನ್ನೋದು ಚೈತ್ರ ಕಾಲೇಜಿನವರ ವಾದ. ಇನ್ನು ವಿದ್ಯಾಶ್ರಮ ಕಾಲೇಜ್ ನೀಡಿರುವ ಜಾಹೀರಾತಿನಲ್ಲಿ ಬೇರೆ ಕಾಲೇಜಿನ ವಿದ್ಯಾರ್ಥಿಗಳಿದ್ದಾರೆ ಅನ್ನೋ ಆರೋಪ ಸಹ ಕೇಳಿಬರುತ್ತಿದೆ.