ತಿರುವನಂತಪುರಂ: ಮೊದಲನೇ ಗಂಡ ಸಾಯುತ್ತಾನೆ ಎಂಬ ಜ್ಯೋತಿಷಿ ಮಾತು ಕೇಳಿ ಪ್ರೇಯಸಿಯೇ ಪ್ರಿಯಕರನಿಗೆ ವಿಷಪ್ರಾಶನ ನೀಡಿ ಹತ್ಯೆಗೈದಿರುವ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿ (Thiruvananthapuram ) ನಡೆದಿದೆ.
ಮೃತದುರ್ದೈವಿಯನ್ನು ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ (23) ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 25ರಂದು ಈತ ಮೃತಪಟ್ಟಿದ್ದಾನೆ. ಅಕ್ಟೋಬರ್ 31ರಂದು ಎಂಟು ಗಂಟೆಗಳ ಕಾಲ ನಡೆದ ವಿಚಾರಣೆ ಬಳಿಕ ಪ್ರೇಯಸಿಯೇ ತನ್ನ ಪ್ರಿಯಕರನನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!
Advertisement
Advertisement
ಆರೋಪಿಯನ್ನು ಗ್ರೀಷ್ಮಾ ಎಂದು ಗುರುತಿಸಲಾಗಿದ್ದು, ಲವ್ ಬ್ರೇಕ್ ಅಪ್ ಮಾಡಿಕೊಳ್ಳುವುದಕ್ಕಾಗಿ ಶರೋನ್ ರಾಜ್ ಅನ್ನು ಕೊಂದಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ. ಕೊಲೆ ಮಾಡಲು ಮೊದಲೇ ಪ್ರೀ ಪ್ಲಾನ್ ಮಾಡಿದ್ದ ಗ್ರೀಷ್ಮಾ ಅಕ್ಟೋಬರ್ 14 ರಂದು ಶರೋನ್ ರಾಜ್ ಅನ್ನು ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಕಷಾಯದೊಂದಿಗೆ ಕೀಟನಾಶಕವನ್ನು ಬೆರೆಸಿ ಕುಡಿಸಿದ್ದಾಳೆ. ಇದಾದ ಬಳಿಕ ಪ್ರಿಯಕರ ವಾಂತಿ ಮಾಡಿಕೊಳ್ಳಲು ಆರಂಭಿಸಿ, ಬಳಿಕ ಸ್ನೇಹಿತನೊಂದಿಗೆ ತೆರಳಿದನು. ಇದನ್ನೂ ಓದಿ: ಸಿವಿಲ್ ಡಿಪ್ಲೊಮಾ ಎಂಜಿನಿಯರಿಂಗ್ ರಾಜ್ಯಕ್ಕೆ ಪ್ರಥಮ ಬಂದ 70ರ ವೃದ್ಧ
Advertisement
Advertisement
ಗ್ರೀಷ್ಮಾ ಮತ್ತು ಶರೋನ್ ಒಂದು ವರ್ಷದಿಂದ ರಿಲೇಶನ್ ಶಿಪ್‍ನಲ್ಲಿದ್ದರು. ಅಲ್ಲದೇ ಮನೆಯವರು ಗ್ರೀಷ್ಮಾಗೆ ಬೇರೆಯವರೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಫೆಬ್ರವರಿಯಿಂದ ಗ್ರೀಷ್ಮಾ ಹಾಗೂ ಶರೋನ್ ನಡುವೆ ಕೆಲವು ಮನಸ್ತಾಪಗಳು ಪ್ರಾರಂಭವಾಯಿತು. ಹೀಗಿದ್ದರೂ ಇಬ್ಬರೂ ರಿಲೇಶನ್ ಶಿಪ್ ಮಂದುವರೆಸಿದರು. ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದ್ದರಿಂದ ಶರೋನ್ ಅನ್ನು ಬಿಡುವ ಸಲುವಾಗಿ, ವಿಷ ನೀಡಿ ಕೊಲ್ಲಲು ನಿರ್ಧರಿಸಿದಳು. ಮೊದಲಿಗೆ ಸಮಾಧಾನದಿಂದ ಮೃದು ಸ್ವಭಾವದಿಂದ ಬ್ರೇಕ್ ಅಪ್ ಮಾಡಿಕೊಳ್ಳೋಣ ಎಂದು ತಿಳಿಸಿದಳು. ಆದರೆ ಇದಕ್ಕೆ ಶರೋನ್ ರಾಜ್ ನಿರಾಕರಿಸಿದ್ದಾನೆ. ಅಲ್ಲದೇ ಜ್ಯೋತಿಷಿ ಒಬ್ಬರು ಗ್ರೀಷ್ಮಾ ಜಾತಕದ ಪ್ರಕಾರ, ಆಕೆಯ ಮೊದಲ ಪತಿ ಸಾಯುತ್ತಾನೆ ಎಂದು ಹೇಳಿದ್ದರು. ಇದರಿಂದ ಭಯಗೊಂಡು ಆತನೊಂದಿಗೆ ಬ್ರೇಕ್ ಮಾಡಿಕೊಳ್ಳಲು ಪ್ರಯತ್ನಿಸಿದಳು.
ಶರೋನ್‍ಗೆ ಏನು ನೀಡಿದ್ದಾಳೆ ಎಂದು ತಿಳಿದುಕೊಳ್ಳಲು ಆತನ ಸಹೋದರ ಗ್ರೀಷ್ಮಾಗೆ ನಿರಂತರ ಕರೆ ಮಾಡುತ್ತಿದ್ದನು. ಆದರೆ ಭಯದಿಂದ ಏನನ್ನೂ ಕೂಡ ಆಕೆ ಹೇಳಿಕೊಳ್ಳಲಿಲ್ಲ. ಒಂದು ವೇಳೆ ಸತ್ಯ ತಿಳಿಸಿದ್ದರೆ ಆತನನ್ನು ಉಳಿಸಬಹುದಾಗಿತ್ತು. ಅಕ್ಟೋಬರ್ 25 ರಂದು ಶರೋನ್ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು. ಆತನ ಸಾವಿಗೆ ಪ್ರೇಯಸಿಯೇ ಕಾರಣ ಎಂದು ಶರೋನ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಪ್ರಕರಣ ಸಂಬಂಧ ಅಕ್ಟೋಬರ್ 20 ರಂದು ಶರೋನ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ತಾನೂ ಯಾರ ಮೇಲೂ ಅನುಮಾನ ಹೊಂದಿಲ್ಲ ಎಂದು ತಿಳಿಸಿ ಕೊನೆಯುಸಿರೆಳೆದಿದ್ದಾನೆ. ಇದೀಗ 8 ಗಂಟೆಗಳ ವಿಚಾರಣೆಯ ಬಳಿಕ ತಪ್ಪೊಪ್ಪಿಕೊಂಡ ಗ್ರೀಷ್ಮಾಳನ್ನು ತಿರುವನಂತಪುರಂನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.