ರೈಲ್ವೆ ಅಂಡರ್ ಪಾಸ್‍ನಲ್ಲಿ ಸಿಲುಕಿದ ಕಾಲೇಜ್ ಬಸ್- ವಿದ್ಯಾರ್ಥಿಗಳ ರಕ್ಷಣೆ

Advertisements

ಚಿಕ್ಕಬಳ್ಳಾಪುರ: ಮಳೆ ನೀರು ನಿಂತಿದ್ದ ರೈಲ್ವೆ ಅಂಡರ್ ಪಾಸ್‍ನಲ್ಲಿ ವಿದ್ಯಾರ್ಥಿಗಳಿದ್ದ ಕಾಲೇಜು ಬಸ್ ಸಿಲುಕಿ ಹಾಕಿಕೊಂಡು ಆತಂಕ ಸೃಷ್ಟಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ನಡೆಯಿತು.

Advertisements

ಐವಿಸಿ ರಸ್ತೆಯಿಂದ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಮಳೆ ನೀರಿಂದ ಜಲಾವೃತವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಬಸ್ ಚಾಲಕ ನೀರಿನಲ್ಲೇ ಬಸ್ ಚಲಾಯಿಸಿದ್ದು, ಬಸ್ ಅಂಡರ್ ಪಾಸ್ ಮಧ್ಯಭಾಗದಲ್ಲಿ ಕೆಟ್ಟು ನಿಂತು ಹೋಗಿದೆ. ಪರಿಣಾಮ ಕಾಲೇಜು ವಿದ್ಯಾರ್ಥಿಗಳೊಂದಿಗೆ ಬಸ್ ಅಂಡರ್ ಪಾಸ್‍ನಲ್ಲಿ ಸಿಲುಕಿಕೊಂಡು ಆತಂಕ ನಿರ್ಮಾಣವಾಗಿತ್ತು. ಇದನ್ನೂ ಓದಿ: ಸಿದ್ದು ವಿರುದ್ಧ ಶ್ರೀರಾಮುಲು ವಾಗ್ದಾಳಿ- ಕೆಲವೇ ನಿಮಿಷದಲ್ಲಿ ಟ್ವೀಟ್ ಡಿಲೀಟ್

Advertisements

ದೇವನಹಳ್ಳಿ ತಾಲೂಕಿನ IVC ರಸ್ತೆ ಯರ್ತಿಗಾನಹಳ್ಳಿ ಬಳಿ ಇರುವ IIBS ಕಾಲೇಜಿನ ವಿದ್ಯಾರ್ಥಿಗಳಿದ್ದ ಬಸ್ ಇದಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ದೇವನಹಳ್ಳಿ ಅಂತಾರಾಷ್ಟ್ರೀಯ ಟ್ರಾಫಿಕ್ ಪೊಲೀಸರು ಕ್ರೇನ್ ಮೂಲಕ ಬಸ್ಸನ್ನು ಹಿಂದಕ್ಕೆಳೆದು ಆತಂಕ ದೂರ ಮಾಡಿದರು. ಬಸ್‍ನಲ್ಲಿದ್ದ 15ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಬದುಕಿದೆವು ಎಂದು ಸಮಾಧಾನಪಟ್ಟಿದ್ದಾರೆ. ಒಟ್ಟಿನಲ್ಲಿ ಜಲಾವೃತವಾದ ರಸ್ತೆಯಲ್ಲಿ ದುಸ್ಸಾಹಸ ಮೆರೆದ IIBS ಕಾಲೇಜ್ ಮ್ಯಾನೇಜ್ಮೆಂಟ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದ ಸುತ್ತ 1,600 ಪೊಲೀಸರಿಂದ ಬಿಗಿ ಭದ್ರತೆ

Live Tv

Advertisements
Exit mobile version