ಚೆನ್ನೈ: ಜಿಲ್ಲಾಧಿಕಾರಿಯೊಬ್ಬರು ಬಡ ವೃದ್ಧೆಯ ಮನೆಗೆ ತೆರಳಿ ಊಟ ಮಾಡಿದ್ದಾರೆ. ಹಸಿವಿನಿಂದ ಅಜ್ಜಿ ಬಳಲುತ್ತಿರುವ ವಿಷಯ ಕೇಳಿದ ಜಿಲ್ಲಾಧಿಕಾರಿಗಳು ತಮ್ಮ ಮನೆಯಿಂದ ಊಟ ಕಟ್ಟಿಸಿಕೊಂಡು ವೃದ್ಧೆಗೂ ನೀಡಿ ತಾವು ಅಲ್ಲಿಯೇ ಭೋಜನ ಮಾಡಿದ್ದಾರೆ. ಈ ಫೋಟೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ತಮಿಳುನಾಡು ರಾಜ್ಯದ ಕರೂರು ಜಿಲ್ಲೆಯ ಚಿನ್ನಮಾಲನಿಕಿಕೆನ್ ಪಟ್ಟಿ 82 ವರ್ಷದ ವೃದ್ಧೆಯ ಮನೆಗೆ ಜಿಲ್ಲಾಧಿಕಾರಿ ಟಿ.ಅಂಬಾಜಗೇನ್ ದಿಢೀರ್ ಅಂತಾ ತೆರಳಿದ್ದರು. ತನ್ನ ಮನೆಗೆ ಜಿಲ್ಲಾಧಿಕಾರಿಗಳು ಬರುತ್ತಿದ್ದಂತೆ ಅಜ್ಜಿ ಆಶ್ಚರ್ಯ ಚಕಿತರಾಗಿದ್ದಾರೆ. ಮನೆಯಿಂದ ತಂದಿದ್ದ ಊಟವನ್ನು ಬಾಳೆ ಎಲೆಯಲ್ಲಿ ಹಾಕಿಕೊಂಡು ಜಿಲ್ಲಾಧಿಕಾರಿಗಳು ನೆಲದ ಮೇಲೆಯೇ ಕುಳಿತು ಊಟ ಮಾಡಿದ್ದಾರೆ. ಸ್ಥಳದಲ್ಲಿಯೇ ಅಜ್ಜಿಗೆ 1 ಸಾವಿರ ರೂ. ವೃದ್ಧಾಪ್ಯವೇತನ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
Advertisement
ಜನರ ಸಮಸ್ಯೆ ಆಲಿಸುವ ವೇಳೆ ಜಿಲ್ಲಾಧಿಕಾರಿಗಳಿಗೆ ತಮ್ಮ ಜಿಲ್ಲೆಯಲ್ಲಿ ವೃದ್ಧೆಯೊಬ್ಬರು ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ ಎಂಬ ವಿಷಯ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಂಬಾಜಗೇನ್ ಅಜ್ಜಿಯ ವಿಳಾಸ ಪಡೆದು ಮನೆಗೆ ತೆರಳಿ ವಸ್ತು ಸ್ಥಿತಿ ಅವಲೋಕಿಸಿ ವೃದ್ಧಾಪ್ಯವೇತನ ನೀಡಲು ಸೂಚಿಸಿದ್ದಾರೆ.
Advertisement
ಕೆಲಸ ಮಾಡಲು ಅಶಕ್ತರಿಗೆ ಸರ್ಕಾರ ಅಂತಹವರಿಗಾಗಿ ವೃದ್ಧಾಪ್ಯವೇತನ ನೀಡುತ್ತಿದೆ. ಅದು ಎಲ್ಲ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಸಿಗುವಂತಾಗಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಶಕ್ತ ಬಡವೃದ್ಧರು ಪ್ರತಿಯೊಬ್ಬರಿಗೆ ವೃದ್ಧಾಪ್ಯವೇತನ ಸಿಗುವಂತಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ಅಂಬಾಜಗೇಏನ್ ತಿಳಿಸಿದ್ದಾರೆ.
Advertisement