ಚಿತ್ರದುರ್ಗ: ಕೊಬ್ಬರಿ ಗೋದಾಮುವೊಂದಕ್ಕೆ (Coconut Warehouse) ಆಕಸ್ಮಿಕ ಬೆಂಕಿ (Fire) ತಗುಲಿದ ಪರಿಣಾಮ ಗೋದಾಮು ಹೊತ್ತಿ ಉರಿದಿದ್ದು, ಲಕ್ಷಾಂತರ ಮೌಲ್ಯದ ಕೊಬ್ಬರಿ ಬೆಂಕಿಗಾಹುತಿಯಾದ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ (Hosadurga) ತಾಲೂಕಿನ ಚಿಕ್ಕಬ್ಯಾಲದಕೆರೆ (Chikkabyaladakere) ಗ್ರಾಮದಲ್ಲಿ ಘಟನೆ ನಡೆದಿದೆ. ಚಿಕ್ಕಬ್ಯಾಲದಕೆರೆ ಬಳಿಯ ತೋಟದಲ್ಲಿದ್ದ ಗೋದಾಮು ಉದ್ಯಮಿ ಜಗದೀಶ್ ಎಂಬವರಿಗೆ ಈ ಕೊಬ್ಬರಿ ಗೋದಾಮು ಸೇರಿದ್ದು, ಗ್ರಾಮದ ಹೊರವಲಯದಲ್ಲಿತ್ತು. ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ ಬಾಂಬ್ ಬೆದರಿಕೆ – ಆಸಾಮಿ ಅಂದರ್!
- Advertisement3
ಇದೀಗ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕೊಬ್ಬರಿ ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ರೀರಾಂಪುರ ಠಾಣೆ ಪಿಐ ಮಧು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಮಂಗಳೂರಿನ ಕುಕ್ಕೇಡಿಯಲ್ಲಿ ಪಟಾಕಿ ಗೋಡೌನ್ ಸ್ಫೋಟಕ್ಕೆ ಕಾರಣ ಏನು? – ತನಿಖೆಯಲ್ಲಿ ರಹಸ್ಯ ಬಯಲು
- Advertisement