ಮಂಗಳೂರು: ವೇಣೂರಿನ ಕುಕ್ಕೇಡಿ ಪಟಾಕಿ ಘಟಕ (Firecracker Godown) ಸ್ಪೋಟದಿಂದ ಮೂವರ ಸಾವು ಪ್ರಕರಣದಲ್ಲಿ ಸತ್ಯಾಂಶ ಬಯಲಾಗಿದೆ. ಪಟಾಕಿ ಘಟಕ ಸ್ಫೋಟಕ್ಕೆ ನಿಯಮ ಮೀರಿ 100 Kg ಗನ್ ಪೌಡರ್ ದಾಸ್ತಾನು ಇರಿಸಿದ್ದೇ ಕಾರಣ ಎಂಬ ರಹಸ್ಯ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಈ ಪಟಾಕಿ ತಯಾರಿಕಾ ಘಟಕಕ್ಕೆ 15 ಕೆಜಿ ಸ್ಫೋಟಕ (Explosives) ಸಂಗ್ರಹಿಸಿಟ್ಟುಕೊಳ್ಳಲು ಮಾತ್ರ ಅನುಮತಿ ನೀಡಲಾಗಿತ್ತು. ಆದ್ರೆ ಅಂಗಡಿ ಆರೋಪಿ ಬಶೀರ್, 100 ಕೆ.ಜಿ ಸ್ಟಾಕ್ ಇಟ್ಟಿದ್ದ. ಪಟಾಕಿ ತಯಾರಿಕೆಗಾಗಿ ಪೊಟ್ಯಾಶಿಯಂ ಕ್ಲೋರೈಡ್, ಪೊಟ್ಯಾಶಿಯಂ ನೈಟ್ರೇಟ್ ಬಳಕೆ ಮಾಡುತ್ತಿದ್ದ. ಇದರಿಂದ ಪಟಾಕಿ ಲೋಡಿಂಗ್ ವೇಳೆ ಒತ್ತಡ ಉಂಟಾಗಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶೆಟ್ಟರ್ ಡೀಸೆಂಟ್ ಜಂಟಲ್ ಮ್ಯಾನ್, ಕಾಂಗ್ರೆಸ್ಸಿಗರು ಉಳಿಸಿಕೊಳ್ಳಬೇಕಾಗಿತ್ತು: ಹರಿಪ್ರಸಾದ್
Advertisement
Advertisement
ಅತಿಯಾಗಿ ಸ್ಫೋಟಕ ದಾಸ್ತಾನು ಇಟ್ಟಿದ್ದ ಕಾರಣಕ್ಕೆ ಇಂತಹ ಭೀಕರ ಸ್ಫೋಟ ಉಂಟಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಚಾರ್ಕೋಲ್, ಗಂಧಕ, ಅಲ್ಯೂಮಿನಿಯಂ ಪೌಡರ್ ಸಹಿತ 85ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನ ಎಫ್ಎಸ್ಎಲ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಗೆ ಕಿರುಕುಳ; ಅನ್ಯಕೋಮಿನ ಯುವಕ ಅರೆಸ್ಟ್ – ಹಿಂದೂ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ
Advertisement
Advertisement
ಫೈರ್ ಸೇಫ್ಟಿ ಬಳಕೆ ಮಾಡದೇ ನಿಯಮ ಉಲ್ಲಂಘಿಸಿ ಪಟಾಕಿ ತಯಾರಿಸುತ್ತಿದ್ದು, ಮೈಸೂರು ಭಾಗದ ಕಾರ್ಯಕ್ರಮದಲ್ಲಿ ಸಂಭ್ರಮಿಸಲು ಪಟಾಕಿ ತಯಾರಿಸುತ್ತಿದ್ದ ಎನ್ನಲಾಗಿದೆ. ಇದಕ್ಕಾಗಿಯೇ ನಿಯಮ ಬಾಹಿರವಾಗಿ ಭಾರೀ ಪ್ರಮಾಣದ ಸ್ಫೋಟಕವನ್ನು ದಾಸ್ತಾನು ಇಟ್ಟಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೋಚಿಮುಲ್ ನೇಮಕಾತಿ ಅಕ್ರಮದಲ್ಲಿ ಮಂಗಳೂರು ವಿವಿ ಭಾಗಿಯಾಗಿರುವ ಶಂಕೆ – ಇಡಿ ವಿಚಾರಣೆ