ಟಾಲಿವುಡ್ ನಟ ನಾಗಚೈತನ್ಯ (Nagachaitanya) 2ನೇ ಮದುವೆಯಾಗೋಕೆ ಸಜ್ಜಾಗಿದ್ದಾರೆ. ಆಗಸ್ಟ್ 8ರಂದು ಶೋಭಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಮಾಜಿ ಪತ್ನಿ ಸಮಂತಾ (Samantha) ಮೇಲೆ ನಾಗಚೈತನ್ಯ ಸೇಡು ತೀರಿಸಿಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:‘ನಾಗ ದೇವರ’ ಮಹಿಮೆ ಸಾರುವ ಕನ್ನಡದ ಸಿನಿಮಾಗಳು
Advertisement
ಆಗಸ್ಟ್ 8ರ ದಿನಾಂಕಕ್ಕೂ ಸಮಂತಾ ಮತ್ತು ನಾಗಚೈತನ್ಯಗೂ ನಂಟಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗ್ತಿದೆ. ಕೆಲ ವರ್ಷಗಳ ಹಿಂದೆ ‘ಏ ಮಾಯಾ ಚೇಸಾವೆ’ ಸಿನಿಮಾ ಮಾಡುವಾಗ ಆ.8ರ ದಿನಾಂಕದಂದು ನಾಗಚೈತನ್ಯಗೆ ಸಮಂತಾ ಪ್ರೇಮ ನಿವೇದನೆ ಮಾಡಿದ್ದರು. ಹಾಗಾಗಿ ಈ ದಿನ ಇಬ್ಬರ ಪಾಲಿಗೆ ವಿಶೇಷವಾಗಿತ್ತು. ಈಗ ಬೇಕಂತಲೇ ಮಾಜಿ ಪತ್ನಿ ವಿರುದ್ಧ ಸೇಡು ತೀರಿಸಿಕೊಳ್ಳಲು ನಟ ಹೀಗೆ ಮಾಡಿದ್ದಾರೆ ಎಂದು ಸಮಂತಾ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:Bigg Boss Kannada 11: ದೊಡ್ಮನೆ ಆಫರ್ ಬಗ್ಗೆ ಜ್ಯೋತಿ ರೈ ಪ್ರತಿಕ್ರಿಯೆ
Advertisement
Advertisement
ನಿನ್ನೆ (ಆ.8) ಶೋಭಿತಾ ಮತ್ತು ನಾಗಚೈತನ್ಯ ನಿಶ್ಚಿತಾರ್ಥ ಸರಳವಾಗಿ ಜರುಗಿದೆ. ಈ ಖುಷಿಯ ಸುದ್ದಿಯನ್ನು ನಾಗರ್ಜುನ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ನಮ್ಮ ಮಗ ನಾಗಚೈತನ್ಯ ಮತ್ತು ಶೋಭಿತಾ ಅವರೊಂದಿಗೆ ಇಂದು ಬೆಳಗ್ಗೆ 9:42ಕ್ಕೆ ನಡೆದ ನಿಶ್ಚಿತಾರ್ಥವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಶೋಭಿತಾಳನ್ನು (Sobhita) ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಖುಷಿಯಾಗುತ್ತಿದೆ. ಈ ಜೋಡಿಗೆ ಅಭಿನಂದನೆಗಳು. ಅವರಿಗೆ ಜೀವನಪೂರ್ತಿ ಸಂತೋಷ ಮತ್ತು ಪ್ರೀತಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ. 8-8-8 ಪ್ರೀತಿಯ ಆರಂಭ ಎಂದು ಈ ಜೋಡಿಗೆ ನಾಗಾರ್ಜುನ ಶುಭಕೋರಿದ್ದಾರೆ.
Advertisement
ಸಮಂತಾ ಜೊತೆಗಿನ ಡಿವೋರ್ಸ್ ನಂತರ ಶೋಭಿತಾ ಜೊತೆ ನಾಗಚೈತನ್ಯ ಹೆಸರು ಕೇಳಿ ಬಂದಿತ್ತು. ಆಗಾಗ ಶೋಭಿತಾ ಜೊತೆ ನಾಗಚೈತನ್ಯ ವಿದೇಶಕ್ಕೆ ತೆರಳುತ್ತಿದ್ದರು. ಆ ಫೋಟೋಗಳು ವೈರಲ್ ಆಗಿತ್ತು. ಈಗ ನಿಶ್ಚಿತಾರ್ಥ ಸುದ್ದಿ ಮೂಲಕ ಕ್ಲ್ಯಾರಿಟಿ ಸಿಕ್ಕಿದೆ.