ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎರಡು ತಿಂಗಳ ಹಿಂದೆ ನವೀನ್ ಅಲಿಯಾಸ್ ಹೊಟ್ಟೆ ಮಂಜ ಎಂಬಾತನ್ನು ಬಂಧಿಸಲು ಸುಳಿವು ನೀಡಿದ್ದು ಒಂದು ಕಾಯಿನ್ ಬಾಕ್ಸ್. ನವೀನ್ ಗೆ ಪದೇ ಪದೇ ಕಾಯಿನ್ ಬೂತ್ ನಿಂದ ಕಾಲ್ ಬರುತ್ತಿದ್ದ ಆಧಾರದ ಮೇಲೆ ಕಾಯಿನ್ ಬೂತ್ ಟ್ರ್ಯಾಕ್ ಮಾಡಿ, ಆರೋಪಿಗಳ ಬಗ್ಗೆ ಎಸ್‍ಐಟಿ ಅಧಿಕಾರಿಗಳು ಸುಳಿವು ಪಡೆದುಕೊಂಡಿದ್ದಾರೆ.
ನವೀನ್ ಗೆ ಗನ್ ನೀಡಿದ್ದಾನೆ ಆರೋಪದ ಮೇಲೆ ಎಸ್‍ಐಟಿ ಅಧಿಕಾರಿಗಳು ಕಾಯಿನ್ ಬೂತ್ ಟ್ರ್ಯಾಕ್ ಮಾಡಿದ್ದಾರೆ. ಇದರಿಂದ ನವೀನ್ ಗೆ ಕರೆ ಮಾಡುತ್ತಿದ್ದ ಪ್ರವೀಣ್, ಅಮೋಲ್, ಅಮಿತ್, ಹಾಗೂ ಮನೋಹರ್ ಎಂಬ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ವಾಗ್ಮೋರೆ ಮೇಲೆ ಎಸ್‍ಐಟಿಗೆ ಅನುಮಾನ ಮೂಡಿದ್ದು ಹೇಗೆ?
Advertisement
Advertisement
ವಿಜಯಪುರ, ಬೆಳಗಾವಿ, ಸೇರಿದಂತೆ ಹಲವು ಕಡೆಗಳಿಂದ ಆರೋಪಿಗಳು ಕಾಯಿನ್ ಬೂತ್ ಗಳಿಂದ ನವೀನ್‍ಗೆ ಕರೆ ಮಾಡುತ್ತಿದ್ದರು. ಹಲವು ಬಾರಿ ನವೀನ್ ಕೂಡ ಕಾಯಿನ್ ಬೂತ್ ಗೆ ವಾಪಸ್ ಕರೆ ಮಾಡುತ್ತಿದ್ದನು. ಈ ವೇಳೆ ಕೇವಲ ಕೊಡ್ ವರ್ಡ್ ನಲ್ಲಿ ಸಂಜೆ ಸಿಗು, ನಾಳೆ ಸಿಗು, ಇಂತಹ ಜಾಗದಲ್ಲಿ ಸಿಗು ಎಂದು ಮಾತನಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ
Advertisement
ಎಸ್‍ಐಟಿ ಅಧಿಕಾರಿಗಳು ವಿಚಾರಣೆಯ ಬಳಿಕ ಬಂಧಿತ ಆರೋಪಿಗಳು ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. ಗೌರಿ ಹತ್ಯೆ ಬಳಿಕ ಮೂರು ತಿಂಗಳಲ್ಲಿ ಅಂದ್ರೆ ವಿಧಾನ ಸಭೆ ಚುನಾವಣೆಗೂ ಮುನ್ನವೇ ವಿಚಾರವಾದಿ ಕೆ.ಎಸ್ ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ ನವೀನ್ ಬಂಧನದ ನಂತರ ಸಂಪರ್ಕ ಸಾಧ್ಯವಾಗದೇ ಪ್ಲಾನ್ ಕೈಬಿಟ್ಟಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ಗೌರಿ ಹತ್ಯೆ ಕೇಸ್: ಆರೋಪಿ ವಾಗ್ಮೋರೆಯಿಂದ ಎಸ್‍ಐಟಿ ತನಿಖೆ ದಾರಿ ತಪ್ಪಿಸೋ ಯತ್ನ!
Advertisement
https://www.youtube.com/watch?v=Ov8Gc1Ih8tw