– ಕಳ್ಳತನದ್ದು ಎಂದು ಗೊತ್ತಿದ್ರು ಖರೀದಿಸಿದ್ದ ವ್ಯಾಪಾರಿ
ಹಾಸನ: ಕಾಫಿ (Coffee) ಬೆಳೆಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾಫಿ ಬೆಳೆ ಕಳವು ಮಾಡಿದ್ದ ಐವರು ಕಳ್ಳರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅರೇಹಳ್ಳಿ ಗ್ರಾಮದ ಶಾಹಿದ್ ಮುಬಾರಕ್ (19) ಜಹೀರ್ (32), ಸಾಗರ್ (21), ಪಜ್ವಲ್ (21), ಹಜೀಜ್ (22) ಹಾಗೂ ಸುನೀಲ್ (35) ಎಂದು ಗುರುತಿಸಲಾಗಿದೆ. ವ್ಯಾಪಾರಿ ಸುನೀಲ್, ಕಳ್ಳತನ ಮಾಡಿದ್ದ ಕಾಫಿ ಎಂದು ತಿಳಿದಿದ್ದರೂ ಖರೀದಿಸಿದ್ದ. ಇದನ್ನೂ ಓದಿ: 2ನೇ ಗಂಡನನ್ನು ಬಿಟ್ಟು ಕಾನ್ಸ್‌ಟೇಬಲ್ ಜೊತೆ ಮಹಿಳೆ ಎಸ್ಕೇಪ್ – ಪೇದೆ ಅಮಾನತು
ಡಿ.11 ರಂದು ಬೇಲೂರು (Beluru) ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಕಾಫಿ ಕಳ್ಳತನ ತಡೆಯಲು ಹೋದ ಜಗನ್ನಾಥ್ ಶೆಟ್ಟಿಯವರ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದರು. ಬಳಿಕ ಭಾರೀ ಪ್ರಮಾಣದ ಕಾಫಿ ಹಣ್ಣುಗಳನ್ನು ಕಳ್ಳತನ ಮಾಡಿದ್ದರು. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಇನ್ಸ್‌ಪೆಕ್ಟರ್ ಜಗದೀಶ್, ಕಾನ್‌ಸ್ಟೇಬಲ್‌ಗಳಾದ ಶಶಿ, ನಂದೀಶ್, ಮಂಜುನಾಥ್ ಹಾಗೂ ಸಿಬ್ಬಂದಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಎಂಜಿನಿಯರಿಂಗ್ ಪರೀಕ್ಷೆ ವೇಳೆ ಗುಂಡಿನ ದಾಳಿ; ಇಬ್ಬರು ಸಾವು, 8 ಮಂದಿಗೆ ಗಾಯ

