ಬೆಂಗಳೂರು: ಪ್ರತಿಷ್ಠಿತ ಕಲ್ಮನೆ ಕಾಫಿ ಶಾಪ್ ಗಳ ಮಾಲೀಕ, ಜೊತೆಗೆ ನೂರಾರು ಕೋಟಿ ಆಸ್ತಿಯ ಒಡೆಯ. ಆದರೆ ಇಷ್ಟೆಲ್ಲಾ ಆಸ್ತಿಯನ್ನ ಈತ ಜನರಿಗೆ ವಂಚಿಸಿ ಮಾಡಿದ್ದಾನೆ.
ಅವಿನಾಶ್ ಪ್ರಭು ಜನರಿಗೆ ವಂಚಿಸಿದ ಉದ್ಯಮಿ. ಬೆಂಗಳೂರು ನಗರದಲ್ಲೇ ಈತನ 11 ಕಾಫಿ ಶಾಪ್ ಗಳಿವೆ. ಇದ್ಯಾವುದನ್ನು ಆತ ಸಂಪಾದನೆ ಮಾಡಿಲ್ಲ. ಅರ್ಧಂಬರ್ಧ ಫ್ಲ್ಯಾಟ್ ಗಳನ್ನ ಕಟ್ಟಿ ಜನರಿಂದ ನೂರಾರು ಕೋಟಿ ಆಸ್ತಿ ಮಾಡಿದ್ದಾನೆ.
Advertisement
Advertisement
ಬೆಂಗಳೂರಿನ ವಿವಿಧೆಡೆ ಸ್ಕೈ ಲೈನ್ ಔರಾ, ಸ್ಕೈ ಲೈನ್ ರಿಟ್ರೀಟ್, ಸ್ಕೈ ಲೈನ್ ಅಕೇಶಿಯಾ ಸೇರಿದಂತೆ ಹಲವಾರು ಪ್ರಾಜೆಕ್ಟ್ ಗಳ ಹೆಸರಲ್ಲಿ ವಂಚಿಸಿದ್ದಾನೆ. ಫ್ಲ್ಯಾಟ್ ಗಳನ್ನು ಕೇವಲ 10% ಅಷ್ಟು ಕಟ್ಟಿ ಜನರಿಂದ 90% ಹಣ ವಸೂಲಿ ಮಾಡಿದ್ದಾನೆ ಎಂದು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹೇಳಿದ್ದಾರೆ.
Advertisement
200 ಜನರಿಗೆ ಸುಮಾರು ನೂರು ಕೋಟಿಯಷ್ಟು ಹಣ ವಂಚಿಸಿದ್ದಾನೆ. ಈತನ ಲ್ಯಾವೆಲ್ಲೆ ರಸ್ತೆಯ ಮನೆ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಖತರ್ನಾಕ್ ವಂಚಕ ಅವಿನಾಶ್ ಪ್ರಭುವನ್ನ ಅರೆಸ್ಟ್ ಮಾಡಿದ್ದಾರೆ. ಜನರ ದುಡ್ಡಲ್ಲಿ ತುಂಬಾ ಆಸ್ತಿ ಮಾಡಿದ್ದಾನೆ.
Advertisement
14 ಬ್ಯಾಂಕ್ ಗಳಲ್ಲಿ ಬ್ಯಾಲೆನ್ಸ್, ಅಲ್ಲದೇ ಕೆಂಗೇರಿಯಲ್ಲಿ 5 ಎಕರೆ ಜಮೀನು, ಅಲ್ಲಾಳಸಂದ್ರದಲ್ಲಿ 3 ಎಕರೆ ಜಮೀನು, ಹೆಣ್ಣೂರಿನಲ್ಲಿ ಮೂರು ಎಕರೆ, ಕನಕಪುರ ಬಳಿ 7 ಎಕರೆ, ಮಂಗಳೂರಿನಲ್ಲಿ 8.5 ಎಕರೆ, ಚೆನ್ನೈನ ಮಾಣಿಕ್ಯ ರಸ್ತೆಯಲ್ಲಿ ಅರ್ಧ ಎಕರೆ ಜಮೀನು ಮಾಡಿದ್ದಾನೆ. ಸದ್ಯ ಈತನ ಮನೆಯಲ್ಲಿದ್ದ ರೇಂಜ್ ರೋವರ್ ಮತ್ತು ಆಡಿ ಕಾರ್ ಸಮೇತ ಎಲ್ಲವನ್ನೂ ಸೀಜ್ ಮಾಡಿದ್ದಾರೆ ಸಿಸಿಬಿ ಪೊಲೀಸರು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv