ತುಮಕೂರು: ತಿಪಟೂರು (Tiptur) ಎಪಿಎಂಸಿ (APMC) ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿ ಧಾರಣೆ 19 ಸಾವಿರ ರೂ. ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ.
2014-15ರಲ್ಲಿ 19 ಸಾವಿರ ಗರಿಷ್ಠ ಬೆಲೆ ಪಡೆದಿದ್ದು ಈವರೆಗಿನ ದಾಖಲೆಯಾಗಿತ್ತು. ಕ್ವಿಂಟಲ್ ಕೊಬ್ಬರಿ (Coconut) 19,051ಕ್ಕೆ ಮಾರಾಟವಾಗುವ ಮೂಲಕ ಈ ಹಿಂದಿನ ದಾಖಲೆ ಮುರಿದಿದೆ. ಎಪಿಎಂಸಿ 2,704 (6,296 ) ಆವಕವಾಗಿದ್ದು, ಕನಿಷ್ಠ 16,800 ರೂ.ಗೆ ಮಾರಾಟವಾಗಿದೆ. ಇದನ್ನೂ ಓದಿ: ವಿಜಯೇಂದ್ರ, ಯತ್ನಾಳ್ ಟೀಂಗೆ ‘ಹೈ’ ಶಾಕ್ – ಐವರು ನಾಯಕರಿಗೆ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್
ಕಳೆದ ಕೆಲ ದಿನಗಳಿಂದ ಕೊಬ್ಬರಿ ಧಾರಣೆ ದಿನದಿಂದ ದಿನಕ್ಕೆ ನಿಧಾನವಾಗಿ ಏರಿಕೆಯಾಗುತ್ತಿರುವುದು ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಾರ್ಚ್ 13ರಂದು ನಡೆದ ಹರಾಜಿನಲ್ಲಿ 14 ಸಾವಿರಕ್ಕೆ ಹೆಚ್ಚಳವಾಗಿತ್ತು. ಮಾರ್ಚ್ 20ರಂದು 17 ಸಾವಿರಕ್ಕೆ ಏರಿಕೆಯಾಗಿತ್ತು. ಕೇವಲ ಹತ್ತು ದಿನದ ಅಂತರದಲ್ಲಿ ಕ್ವಿಂಟಲ್‌ಗೆ 5 ಸಾವಿರ ಜಿಗಿತ ಕಂಡಿದೆ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿರುವುದು ದೃಢ
ಬೆಲೆ ಏರಿಕೆಗೆ ಕಾರಣ ಏನು?
ಬೇಡಿಕೆಯಷ್ಟು ಆವಕ ಇಲ್ಲದಿರುವುದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಕೊಬ್ಬರಿ ಹಾಗೂ ಎಣ್ಣೆಗೆ ಬೇಡಿಕೆ ಹೆಚ್ಚಿದೆ. ಅದರೊಂದಿಗೆ ಕೇರಳ ತಮಿಳುನಾಡಿನಲ್ಲೂ ಬೇಡಿಕೆ ಹೆಚ್ಚಾಗಿರುವುದು ಒಮ್ಮೆಲೇ ದರ ಏರಿಕೆಯಾಗುವಂತೆ ಮಾಡಿದೆ ಎನ್ನುವುದು ವರ್ತಕರ ವಿಶ್ಲೇಷಣೆ. ಇದನ್ನೂ ಓದಿ: ಜಮೀನು ರಸ್ತೆಗಾಗಿ ಗಲಾಟೆ – ನಡುರಸ್ತೆಯಲ್ಲೇ ಚಿಕ್ಕಪ್ಪನ ಮೇಲೆ ಮಚ್ಚಿನಿಂದ ಹಲ್ಲೆ