ಅಕ್ಟೋಬರ್ 15ರಿಂದ ನವರಾತ್ರಿ ಆರಂಭವಾಗಿದ್ದು, ದುರ್ಗೆಯ 9 ಅವತಾರಗಳನ್ನು ಈ ಸಮಯದಲ್ಲಿ ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಕೆಲವರು ವ್ರತ, ಪೂಜೆಗಳನ್ನು ಕೈಗೊಂಡು ದೇವರಿಗೆ ನೈವೇದ್ಯ ಸಮರ್ಪಿಸಿ ನಂತರ ಆಹಾರ ಸೇವಿಸುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಮಾಡಬಲ್ಲ ತೆಂಗಿನಕಾಯಿ ಬರ್ಫಿಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನಿಮಗೆ ತಿಳಿಸಿಕೊಡುತ್ತೇವೆ. ಇದನ್ನು ದೇವರಿಗೂ ಸಮರ್ಪಿಸಬಹುದಾಗಿದ್ದು, ಮಕ್ಕಳಿಗೂ ತುಂಬಾ ಇಷ್ಟವಾಗುವ ಸ್ವೀಟ್ ಇದಾಗಿದೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಮಖಾನಾ ಖೀರ್ ಮಾಡಿ ನೋಡಿ
ಬೇಕಾಗುವ ಸಾಮಗ್ರಿಗಳು:
ತೆಂಗಿನಕಾಯಿ ತುರಿ – 2 ಕಪ್
ಸಕ್ಕರೆ – 1 ಕಪ್
ಹೆಚ್ಚಿದ ಬಾದಾಮಿ – 4
ಕುಟ್ಟಿ ಪುಡಿಮಾಡಿದ ಏಲಕ್ಕಿ – 4
ತುಪ್ಪ – 2 ಚಮಚ
ಹಾಲು – 2 ಚಮಚ
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್‌ಗೆ ಸ್ವಲ್ಪ ತುಪ್ಪ ಹಾಕಿಕೊಂಡು ತುರಿದ ತೆಂಗಿನಕಾಯಿ ತುರಿಯನ್ನು ಹಾಕಿಕೊಂಡು 3 ನಿಮಿಷಗಳ ಕಾಲ ಚನ್ನಾಗಿ ಫ್ರೈ ಮಾಡಿಕೊಳ್ಳಿ.
* ತೆಂಗಿನ ತುರಿ ಘಮಬರುವ ಸಮಯದಲ್ಲಿ ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಸಕ್ಕರೆ ನೀರಾಗಿ ಮಿಶ್ರಣ ಗಟ್ಟಿಯಾದ ಬಳಿಕ ಅದಕ್ಕೆ ಕುಟ್ಟಿದ ಏಲಕ್ಕಿ ಪುಡಿಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಈಗ ಒಂದು ಪ್ಲೇಟ್‌ಗೆ ತುಪ್ಪ ಹಚ್ಚಿಟ್ಟುಕೊಳ್ಳಿ. ಬಳಿಕ ಇದಕ್ಕೆ ತೆಂಗಿನತುರಿ ಮಿಶ್ರಣವನ್ನು ಹಾಕಿಕೊಂಡು ಸಮತಟ್ಟಾಗಿ ಮಾಡಿಕೊಳ್ಳಿ. ಬಳಿಕ ಇದರ ಮೇಲೆ ಬಾದಾಮಿ ಹಾಕಿಕೊಂಡು ಚಾಕುವಿನ ಸಹಾಯದಿಂದ ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಿ.
* ಬಳಿಕ ಇದನ್ನು ಮೂರು ಗಂಟೆ ಹಾಗೇ ಇಡಿ. ಈಗ ತೆಂಗಿನಕಾಯಿ ಬರ್ಫಿ ಸವಿಯಲು ಸಿದ್ಧ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ – ರಾಜಗಿರಾ ಹಲ್ವಾ ಮಾಡಿ ವ್ರತವನ್ನಾಚರಿಸಿ
Web Stories