ಕಲಬುರಗಿ: ಹಾವು ಹುಂಜವನ್ನು ನುಂಗುವುದು ಕಾಮನ್, ಆದರೆ ಜೀವಂತ ನಾಗರ ಹಾವನ್ನು ಕೋಳಿಯೊಂದು ತಿಂದು ಹಾಕಿರುವ ಅಚ್ಚರಿಯ ಘಟನೆ ಕಲಬುರಗಿಯ ಸೇಡಂನ ಅಂಬೇಡ್ಕರ ವಸತಿ ನಿಲಯದಲ್ಲಿ ನಡೆದಿದೆ.
ಹುಂಜ ಹಾವನ್ನು ನುಂಗುತ್ತಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ಈ ದೃಶ್ಯವನ್ನು ಕಂಡ ಅಲ್ಲಿನ ಕೆಲ ಯುವಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.
ದಾರಿ ತಪ್ಪಿದಂತೆ ಬಂದ ಹಾವು ಹುಂಜದ ಬಳಿ ಸಿಕ್ಕಿಹಾಕಿಕೊಂಡಿದ್ದು, ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನ ನಡೆಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಹುಂಜ ಹಾವಿನ ತಲೆಯನ್ನು ತನ್ನ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಗಾಯಗೊಳಿಸಿತು. ಈ ವೇಳೆ ಹಾವು ನೋವುನಿಂದ ಒದ್ದಾಟ ನಡೆಸುತ್ತಿದಂತೆ ನುಂಗಲು ಆರಂಭಿಸಿದ ಕೋಳಿ ಕ್ಷಣ ಮಾತ್ರದಲ್ಲಿಯೇ ಗುಳುಂ ಮಾಡಿತು. ಜೀವಂತವಾಗಿರುವಾಗಲೇ ಹಾವನ್ನು ನುಂಗಿದ್ದ ಹುಂಜವನ್ನು ಕಂಡ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=v-xfmTa956M
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv