ಕೊಪ್ಪಳ: ಮಾನವರಂತೆ ಅದು ಕೂಡ ವನ್ಯ ಪ್ರಾಣಿ. ಅದಕ್ಕೂ ವಿಭಿನ್ನ ಆಸಕ್ತಿ ಕುತೂಹಲ ಇದ್ದೆ ಇರುತ್ತೆ. ಇದಕ್ಕೊಂದು ನಿದರ್ಶನ ಅನ್ನುವಂತೆ ಹಾವೊಂದು ಬೈಕೇರಿ ಕುಳಿತುಕೊಳ್ಳೋ ಮೂಲಕ ಅಚ್ಚರಿ ಮೂಡಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಹೌದು, ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಸುಮಾರು ನಾಲ್ಕುವರೆ ಅಡಿ ಉದ್ದದ ನಾಗರ ಹಾವೊಂದು ಇದ್ದಕ್ಕಿದ್ದಂತೆ ರಸ್ತೆ ದಾಟಿಕೊಂಡು ಬಂದು ಮತ್ತೊಂದು ಬದಿಯಲ್ಲಿ ನಿಲ್ಲಿಸಿದ್ದ ಗ್ರಾಮದ ಮೆಕ್ಯಾನಿಕ್ ಹುಸೇನ್ ಅವರ ಬೈಕ್ ಏರಿ ಕುಳಿತಿದೆ.
ರಾತ್ರಿ 11ರ ಸುಮಾರಿಗೆ ನಡೆದ ಈ ಘಟನೆಯನ್ನು ಹುಸೇನ್ ಖುದ್ದು ವೀಕ್ಷಿಸಿದ್ದಾರೆ. ಆ ನಾಗರ ಹಾವನ್ನು ಬೈಕಿನಿಂದ ಇಳಿಸಲು ಯತ್ನಿಸಿದ್ದಾರೆ. ಆದ್ರೆ ನಾಗ ಸುಮ್ಮನಿರದೇ ಬುಸುಗುಟ್ಟಿದ್ದಾನೆ.
ವಿಷಯ ತಿಳಿದು ಹತ್ತಾರು ಯುವಕರು ಸ್ಥಳದಲ್ಲಿ ನೆರೆದಿದ್ದಾರೆ. ಇದರಿಂದ ಗಲಿಬಿಲಿಗೊಂಡ ಹಾವು ಬೈಕ್ ಸೀಟಿನಿಂದ ಕೆಳಗಿಳಿದು ನೇರ ಎಂಜಿನ್ ಒಳಗೆ ನುಸುಳಿದ್ದಾನೆ. ಸುರಕ್ಷಿತವಾಗಿ ತೆಗೆಯುವ ಉದ್ದೇಶಕ್ಕೆ ಎಷ್ಟೇ ಪ್ರಯತ್ನ ಮಾಡಿದ್ರೂ ಬೈಕ್ ಸವಾರಿಗೆಂದು ಬಂದ ನಾಗ ಕೊನೆಗೆ ಇಹಲೋಕ ತ್ಯಜಿಸುವ ಮೂಲಕ ಯುವಕರಲ್ಲಿ ನಿರಾಸೆ ಮೂಡಿಸಿದೆ.
https://youtu.be/JjTWlu0juhc