ತಿರುವನಂತಪುರ : ನಾಗರಹಾವೊಂದು ಕೋಳಿ ಗೂಡಿಗೆ ನುಗ್ಗಿ 8 ಮೊಟ್ಟೆಗಳನ್ನು ನುಂಗಿದ್ದು, ಅದರಲ್ಲಿ 7 ಮೊಟ್ಟೆಗಳನ್ನು ಹೊರ ಹಾಕಿರುವ ವಿಡಿಯೋ ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏಪ್ರಿಲ್ 12ರಂದು ಕೇರಳದ ಮನಂತವಾಡಿ ತಾಲೂಕಿನ ತಲಪ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಗಿರೀಶ್ ಎಂಬವರ ಮನೆಯ ಕೋಳಿ ಗೂಡಿಗೆ ನಾಗರಹಾವು ನುಗ್ಗಿತ್ತು. ಗೂಡಿನಲ್ಲಿದ್ದ ಕೋಳಿಯನ್ನು ಸಾಯಿಸಿದ ನಾಗರಹಾವು ಅಲ್ಲಿದ್ದ 8 ಮೊಟ್ಟೆಗಳನ್ನು ನುಂಗಿದೆ. ಕೂಡಲೇ ಭಯಬೀತರಾದ ಗಿರೀಶ್ ಉತ್ತರ ವಯನಾಡ್ ಬೇಗೂರು ಅರಣ್ಯ ಪ್ರದೇಶದ ವನ್ಯಜೀವಿ ರಕ್ಷಕರಾಗಿರುವ ವಿ.ಪಿ ಸುಜಿತ್ ಗೆ ವಿಷಯ ತಿಳಿಸಿದ್ದಾರೆ.
Advertisement
ಮೊಟ್ಟೆಗಳನ್ನು ನುಂಗಿದ ಹಾವು ಚಲಿಸಲಾರದೇ ಗೂಡಿನಲ್ಲಿ ಉಳಿದುಕೊಂಡಿತ್ತು. ಸ್ಥಳಕ್ಕಾಗಮಿಸಿದ ಸುಜಿತ್, ಹಾವನ್ನು ಗೂಡಿನಿಂದ ಹೊರ ತೆಗೆದಿದ್ದಾರೆ. ಗೂಡಿನಿಂದ ಹೊರ ಬಂದ ನಾಗರಾಜ ನುಂಗಿದ 8 ಮೊಟ್ಟೆಗಳ ಪೈಕಿ 7 ನ್ನು ಹೊರಹಾಕಿದ್ದಾನೆ.
Advertisement
ನಾಗರಹಾವುಗಳು ಮೊಟ್ಟೆಗಳನ್ನು ನುಂಗಿದಾಗ ಅವುಗಳಿಗೆ ಚಲಿಸಲು ಕಷ್ಟವಾಗುತ್ತದೆ. ಈ ವೇಳೆ ಹಾವುಗಳಿಗೆ ಜನರು ತೊಂದರೆ ನೀಡಬಾರದು. ರಕ್ಷಿಸಿರುವ ಹಾವನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಅಂತಾ ಸುಜಿತ್ ತಿಳಿಸಿದ್ದಾರೆ.