ಮೈಸೂರು: ಲವ್ ಬರ್ಡ್ಸ್ ಪಂಜರದೊಳಕ್ಕೆ ನಾಗರಹಾವು ನುಗ್ಗಿ ಎರಡು ಪಕ್ಷಿಗಳನ್ನು ತಿಂದ ಘಟನೆ ಮೈಸೂರು ಹೊರವಲಯದ ರೂಪನಗರದಲ್ಲಿ ನಡೆದಿದೆ.
ಜಯಪ್ರಕಾಶ್ ಮನೆಯಲ್ಲಿ ಪಂಜರದೊಳಗಿದ್ದ ಎರಡು ಲವ್ ಬರ್ಡ್ಸ್ ಗಳನ್ನು ತಿಂದು ತೇಗಿದ ನಾಗರಹಾವು ಉಳಿದ ಲವ್ ಪಕ್ಷಿಗಳನ್ನು ತಿನ್ನಲು ಪಂಜರದೊಳಗೆ ಅಡಗಿ ಕುಳಿತಿತ್ತು. ಈ ವೇಳೆ ಪಕ್ಷಿಗಳು ಭಯದಿಂದ ಪಂಜರದೊಳಗೆ ಚೀರಾಡಿಕೊಂಡು ಹಾರಾಡುತ್ತಿದ್ದವು.
ಪಕ್ಷಿಗಳ ಅತಿಯಾದ ಚೀರಾಟ ಕೇಳಿ ಮನೆ ಮಂದಿ ಓಡಿ ಬಂದಿದ್ದಾರೆ. ಆಗ ಪಂಜರದಲ್ಲಿದ್ದ ನಾಗರಹಾವು ಕಂಡು ತಬ್ಬಿಬ್ಬಾಗಿದ್ದಾರೆ. ಕೂಡಲೇ ಮನೆಯವರು ಉರಗ ತಜ್ಞ ಸ್ನೇಕ್ ಶಾಮ್‍ಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಂ ಪಂಜರದೊಳಗಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಆದರೆ ಪಂಜರದೊಳಗೆ ಸೇರಿಕೊಂಡು ಎರಡು ಲವ್ ಬರ್ಡ್ಸ್ ತಿಂದು ಹಾಕಿರುವುದರಿಂದ ಮನೆಯವರು ಬೇಸರ ವ್ಯಕ್ತಪಡಿಸಿದ್ದಾರೆ.