ರಾಯಚೂರು: ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಕಲ್ಲಿದ್ದಲು ಕಳ್ಳತನ ಸಂಬಂಧ ರೈಲ್ವೇ ಅಧಿಕಾರಿಗಳ ತಂಡ ಪರಿಶೀಲನೆ ಆರಂಭಿಸಿದೆ. ಈ ಮಧ್ಯೆ ಆರ್‌ಟಿಪಿಎಸ್ ಮಾತ್ರ ಏನೂ ನಡೆದಿಲ್ಲ ಎನ್ನುವ ಹಾಗೇ ಸೈಲೆಂಟಾಗಿರೋದು ಹಲವು ಅನುಮಾನಗಳನ್ನ ಸೃಷ್ಟಿಸಿದೆ.
ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್‌ನಲ್ಲಿ ಕಲ್ಲಿದ್ದಲು ನಿರ್ವಹಣೆ ಹಾಗೂ ಉಸ್ತುವಾರಿ ವಹಿಸಿಕೊಂಡಿರುವವರಿಂದಲೇ ಕಳ್ಳತನ ನಡೆದಿದೆ. ಈ ಸಂಬಂಧ ಈಗಾಗಲೇ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:PUBLiC TV Impact – ಕಲ್ಲಿದ್ದಲು ಕಳ್ಳತನದ ಬಗ್ಗೆ ಪ್ರಕರಣ ದಾಖಲಿಸಿದ ವೈಟಿಪಿಎಸ್
ವೈಟಿಪಿಎಸ್ ಘಟಕಗಳ ನಿರ್ವಹಣೆ ಮತ್ತು ಚಾಲನೆ ಜವಾಬ್ದಾರಿ ಹೊತ್ತಿರುವ ಪವರ್ ಮೇಕ್ ಕಂಪನಿ ನಿಯಮ ಉಲ್ಲಂಘಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದೆ ಎಂದು ಪವರ್ ಮೇಕ್ ಕಂಪನಿ ಉಪಾಧ್ಯಕ್ಷ ಅಜಯ್ ಕುಮಾರ್ ಕೆ. ಹಾಗೂ ಕಂಪನಿ ಉಸ್ತುವಾರಿ ಸುರೇಂದ್ರನಾಥ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವ್ಯಾಗಾನ್‌ಗಳನ್ನ ಸಂಪೂರ್ಣ ಖಾಲಿ ಮಾಡದೇ ಕಲ್ಲಿದ್ದಲನ್ನು ಹಾಗೆಯೇ ಉಳಿಸಿ ವಂಚನೆ ಮಾಡಲಾಗಿದೆ ಅಂತ ಎಫ್‌ಐಆರ್ ದಾಖಲಾಗಿದೆ.
ಸದ್ಯ ರೈಲ್ವೇ ಇಲಾಖೆ ಗುಂತಕಲ್ ಡಿವಿಜನ್‌ನ ಇಂಟಲಿಜೆನ್ಸ್ ವಿಭಾಗದ ವಿಶೇಷ ತಂಡದಿಂದ ರೈಲ್ವೇ ನಿಲ್ದಾಣದಲ್ಲಿ ಪರಿಶೀಲನೆ ನಡೆದಿದೆ. ವ್ಯಾಗಾನ್‌ಗಳ ಸ್ವಚ್ಛತೆ, ಕಲ್ಲಿದ್ದಲು ಸಂಗ್ರಹಣೆ, ಸಾಗಣೆ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.ಇದನ್ನೂ ಓದಿ: ಕ್ಲೀನಿಂಗ್ ಹೆಸರಲ್ಲಿ ಕಲ್ಲಿದ್ದಲು ಲೂಟಿ – ಪ್ರತಿನಿತ್ಯ 150 ಟನ್ ಸಾಗಾಟ

