ಮಂಗಳೂರು: ಬಂದೂಕು ತೋರಿಸಿ ಉಳ್ಳಾಲದ ಕೋಟೆಕಾರು (Kotekar) ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ (Co Operative Bank) ಭಾರೀ ದರೋಡೆ ನಡೆದಿದೆ.
ಇಂದು ಬೆಳಗ್ಗೆ ಹಾಡಹಗಲೇ ಐದು ಮಂದಿ ಆಗಂತುಕರ ತಂಡ ಈ ಕೃತ್ಯ ಎಸಗಿದೆ. ಫಿಯೆಟ್ ಕಾರಿನಲ್ಲಿ ಬಂದ ತಂಡ ಬಂದೂಕು ತೋರಿಸಿ ದರೋಡೆ ನಡೆಸಿದೆ.
Advertisement
ಚಿನ್ನ, ಒಡವೆ, ನಗದುಗಳನ್ನು ಕಳವು ಮಾಡಿದ ತಂಡ ಮಂಗಳೂರು (Mangaluru) ಕಡೆಗೆ ಪರಾರಿಯಾಗಿದೆ. ಸ್ಥಳಕ್ಕೆ ಪೊಲೀಸರ ತಂಡ ದೌಡಾಯಿಸಿ ಪರಿಶೀಲಿಸುತ್ತಿದೆ.
Advertisement
ಇಂದು ಸಿಎಂ ಸಿದ್ದರಾಮಯ್ಯ (Siddaramaiah) ಮಂಗಳೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬ್ಯಾಂಕಿಗೆ ಸ್ಥಳೀಯ ಶಾಸಕರಾಗಿರುವ ಯುಟಿ ಖಾದರ್ ಆಗಮಿಸಿ ಸಿಬ್ಬಂದಿ ಜೊತೆ ಮಾತನಾಡಿದರು.