ಬಳ್ಳಾರಿ: ಸಿಎನ್‌ಜಿ ಗ್ಯಾಸ್ ಸೋರಿಕೆಯಾಗಿ (CNG Gas Leakage) ನಡೆಯಬಹುದಾಗಿದ್ದ ಬಹುದೊಡ್ಡ ಅನಾಹುತ ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿರುವ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹೂವಿನ ಹಡಗಲಿ (Hoovina Hadagali) ತಾಲೂಕಿನ ತಿಪ್ಪಾಪುರ ಗ್ರಾಮದ ಬಳಿ ನಡೆದಿದೆ.
ತಿಪ್ಪಾಪುರ ಗ್ರಾಮದ ಖಾಸಗಿ ಕಂಪನಿಯಿಂದ ಸಿಎನ್‌ಜಿ ಗ್ಯಾಸ್ ತುಂಬಿಕೊಂಡು ಗದಗ ಜಿಲ್ಲೆಯ ನರಗುಂದ ಪೆಟ್ರೋಲ್ ಬಂಕ್‌ಗೆ ಲಾರಿ ತೆರಳುತ್ತಿದ್ದಾಗ ಟ್ಯಾಂಕ್‌ನ ಕೊಳವೆ ತುಂಡಾಗಿದ್ದರಿಂದ ಈ ಘಟನೆ ನಡೆದಿದೆ.
ಇದನ್ನೂ ಓದಿ: ಎಲ್ಲಾ ಖಾಸಗಿ ಆಸ್ತಿ ಮೇಲೆ ಸರ್ಕಾರಕ್ಕೆ ಹಕ್ಕಿಲ್ಲ – ಸುಪ್ರೀಂ ಐತಿಹಾಸಿಕ ತೀರ್ಪು
ಗ್ಯಾಸ್ ಲೀಕ್ ಆಗಿ ಸೋರಿಕೆಯಾಗುತ್ತಿದ್ದ ಶಬ್ದದಿಂದ ಎಚ್ಚೆತ್ತ ಚಾಲಕ, ರಸ್ತೆ ಪಕ್ಕ ಲಾರಿ ನಿಲ್ಲಿಸಿ ದೂರ ಹೋಗಿ ಇದೇ ರಸ್ತೆ ಮೂಲಕ ತೆರಳುತ್ತಿದ್ದ ವಾಹನ ಸವಾರರಿಗೆ ಬೇರೆ ಮಾರ್ಗವಾಗಿ ಹೋಗುವಂತೆ ತಿಳಿಸಿದ್ದಾನೆ. ಚಾಲಕನ ಮಾಹಿತಿ ಮೆರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ
ಲಾರಿಯಲ್ಲಿದ್ದ 60 ಟ್ಯಾಂಕ್‌ಗಳಲ್ಲೂ ಗ್ಯಾಸ್ ತುಂಬಿಸಲಾಗಿತ್ತು. 60 ಟ್ಯಾಂಕ್ ಗಳಲ್ಲಿನ ಸಂಪೂರ್ಣ ಗ್ಯಾಸ್ ಖಾಲಿಯಾಗುವವರೆಗೂ ಸ್ಥಳದಲ್ಲಿ ಆತಂಕ ಆವರಿಸಿತ್ತು.