– ಆರ್‌ಎಸ್‌ಎಸ್‌ನ ಮುಂದಿನ ಟಾರ್ಗೆಟ್ ಕ್ರೈಸ್ತ ಸಮುದಾಯ ಎಂದ ರಾಗಾ
– ಮಸೀದಿ, ಸ್ಮಶಾನ ಮುಟ್ಟಲ್ಲ ಅಂದ್ರು ರವಿಶಂಕರ್
ನವದೆಹಲಿ: ಸಂಸತ್‌ನಲ್ಲಿ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆ 2024 (Waqf Amendment Bill 2024), ಕಾಯ್ದೆಯಾಗೋದು ಮಾತ್ರ ಬಾಕಿ ಇದೆ.
ಇಂತಹ ಹೊತ್ತಲ್ಲಿ ವಕ್ಫ್ ವಶದಲ್ಲಿರುವ ವಿವಾದಾತ್ಮಕ ಸಾರ್ವಜನಿಕ ಆಸ್ತಿಯಲ್ಲಿ ಬಡವರಿಗಾಗಿ ಶಾಲೆ, ಕಾಲೇಜು, ಆಸ್ಪತ್ರೆ, ಮನೆಗಳನ್ನು ಕಟ್ಟಿಸ್ತೇವೆ. ಇನ್ಮುಂದೆ ವಕ್ಫ್ ಬೋರ್ಡ್ (Waqf Board) ಹೆಸರಲ್ಲಿ ಒಂದಿಂಚು ಭೂಮಿಯನ್ನು ಕಬಳಿಸಲು ಆಗಲ್ಲ ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi adityanath) ಹೇಳಿದ್ದಾರೆ. ಇದನ್ನೂ ಓದಿ: ಭಾರತ ಮೂಲದ ತಮಿಳು ಸಮುದಾಯಕ್ಕೆ 10,000 ಮನೆ ನಿರ್ಮಾಣ ಭರವಸೆ ನೀಡಿದ ಮೋದಿ
ಮತ್ತೊಂದ್ಕಡೆ, ಯಾವುದೇ ಮಸೀದಿ, ಪ್ರಾರ್ಥನಾ ಸ್ಥಳ, ಕಬರ್‌ಸ್ತಾನವನ್ನು ಮುಟ್ಟಲ್ಲ.. ಎಂದು ಬಿಜೆಪಿಯ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಈ ಮಧ್ಯೆ, ಭಾರತದಲ್ಲಿ ಅತಿ ಹೆಚ್ಚು ಭೂಮಿಯ ಒಡೆತನ ಹೊಂದಿರೋದು ವಕ್ಫ್‌ಬೋರ್ಟ್ ಅಲ್ಲ. ಕ್ಯಾಥೊಲಿಕ್ ಚರ್ಚ್‌ಗಳ ಬಳಿ ಹೆಚ್ಚು ಭೂಮಿಯಿದೆ ಎಂದು ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆದ್ರೆ, ಇದನ್ನು ಮರು ದಿನವೇ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: L2: ಎಂಪುರಾನ್ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್ – ಸಂಭಾವನೆ ವಿವರ ನೀಡುವಂತೆ ಸೂಚನೆ
ಇದನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಸಂಘಪರಿವಾರ ಶೀಘ್ರವೇ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು, ಧಾರವಾಡದಲ್ಲಿ ವಕ್ಫ್ ಬಿಲ್ ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಇದನ್ನೂ ಓದಿ: ಮಂಡ್ಯದಲ್ಲಿ 3.80 ಕೋಟಿ ವೆಚ್ಚದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣ: ಚಲುವರಾಯಸ್ವಾಮಿ