ಹಾವೇರಿ: ಸಾಲಮನ್ನಾ ಹಾಗೂ ವಿವಿಧ ಭೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ಆಗಮಿಸಿದ ರೈತರನ್ನ ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾನಗಲ್ ತಾಲೂಕು ಬಾಳಂಬೀಡ ಮತ್ತು ಹಿರೇಕಾಂಶಿ ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ಯೋಜನೆಯ ಅಡಿಗಲ್ಲು ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಸಿಎಂಗೆ ಮನವಿ ನೀಡಲು ಹೋಗುತ್ತಿರೋ 20ಕ್ಕೂ ಅಧಿಕ ರೈತರನ್ನ ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ರೈತರಿಗೆ ಸಾಲಮನ್ನಾ ಯೋಜನೆ, ರೈತರಿಗೆ ಹೊಸ ಸಾಲವನ್ನ ಬ್ಯಾಂಕ್‍ನಲ್ಲಿ ನೀಡುತ್ತಿಲ್ಲ, ಬೆಳೆ ವಿಮೆ ಹಾಗೂ ಪರಿಹಾರ ಸಿಕ್ಕಿಲ್ಲ, ಅಲ್ಲದೆ ಪೊಲೀಸ್ ಇಲಾಖೆಯ ಔರಾದಕರ್ ವರದಿಯನ್ನ ಜಾರಿಗೆ ಮಾಡಬೇಕು ಎಂದು ರೈತ ಮುಖಂಡ ಹನುಮಂತ ಕಬ್ಬಾರ ಆಗ್ರಹಿಸಿದ್ದಾರೆ.