ಬೆಂಗಳೂರು: ಸಿಲಿಕಾನ್ ಸಿಟಿಯ ಅದೆಷ್ಟೋ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಎಷ್ಟೇ ಹಳ್ಳ ಬಿದ್ದರೂ ಅಧಿಕಾರಿಗಳು ಮಾತ್ರ ದುರಸ್ಥಿ ಕಾರ್ಯಕ್ಕೆ ಮುಂದಾಗಲ್ಲ. ಆದ್ರೆ ರಾಜ್ಯದ ದೊರೆ ಸಿಎಂ ಯಡಿಯೂರಪ್ಪರ ಡಾಲರ್ಡ್ ಕಾಲೋನಿ ನಿವಾದ ರಸ್ತೆ ಮಾತ್ರ ಅದೆಂತ ಪುಣ್ಯ ಮಾಡಿತ್ತೋ ಗೊತ್ತಿಲ್ಲ. ಚಿಕ್ಕ ಗುಂಡಿ ಬಿದ್ದಿದ್ದಕ್ಕೆ ರಾತ್ರೋ ರಾತ್ರಿ ರಸ್ತೆಗೆ ಡಾಂಬರೀಕರಣ ಭಾಗ್ಯ ದೊರೆತಿದೆ.
ಸಿಎಂ ಯಡಿಯೂರಪ್ಪ ಅಧಿಕೃತ ಸರ್ಕಾರಿ ಬಂಗಲೆಗೆ ಹೋಗಿಲ್ಲ. ಹೀಗಾಗಿ ನಿತ್ಯ ತಮ್ಮ ಖಾಸಗಿ ಮನೆ ಧವಳಗಿರಿಯಿಂದಾನೇ ಓಡಾಡುತ್ತಿದ್ದಾರೆ. ನಿತ್ಯ ನೂರಾರು ಜನ ಸಿಎಂ ಭೇಟಿಗೆ ಬರ್ತಾರೆ. ಫಾರಿನ್ ಡೆಲಿಗೇಟ್ಸ್ ಕೂಡಾ ಬರ್ತಾನೆ ಇರ್ತಾರೆ. ಹೀಗಾಗಿ ರಸ್ತೆ ಸಮಸ್ಯೆ ಇದ್ರೆ ಸರಿಯಾಗಲ್ಲ ಅಂತ ಅಧಿಕಾರಿಗಳು ಡಾಂಬರೀಕರಣ ಭಾಗ್ಯ ಕೊಟ್ಟಿದ್ದಾರೆ.
Advertisement
Advertisement
ಕೆಲ ದಿನಗಳ ಹಿಂದೆ ಸಿಎಂ ಮನೆಯ ಡಾಲರ್ಸ್ ಕಾಲೋನಿ ರಸ್ತೆಯಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗುಂಡಿ ಇತ್ತು. ಅದ್ಯಾವ ಅಧಿಕಾರಿ ಲೋಕೋಪಯೋಗಿ ಇಲಾಖೆಗೆ ತರಾಟೆಗೆ ತೆಗೆದುಕೊಂಡ್ರೋ ಗೊತ್ತಿಲ್ಲ. ರಾತ್ರೋ ರಾತ್ರಿ ಅಧಿಕಾರಿಗಳು ಡಾಂಬರೀಕರಣ ಮಾಡಿದ್ದಾರೆ. ಸಿಎಂ ಮನೆ ರಸ್ತೆ ಅಂತ ರಾತ್ರೊ ರಾತ್ರಿ ರಸ್ತೆ ಹಾಕೋ ಅಧಿಕಾರಿಗಳು ನಗರದ ಗುಂಡಿ ಬಿದ್ದ ರಸ್ತೆಯನ್ನು ಇಷ್ಟೇ ನಿಷ್ಠೆಯಿಂದ ಮುಚ್ಚಿದ್ರೆ ಅನುಕೂಲ ಆಗುತ್ತೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.