ಎರಡು ದಿನ ಮುಂಚಿತವಾಗಿ ಬರ್ತ್ ಡೇ ಆಚರಿಸಿಕೊಂಡ ಸಿಎಂ

Public TV
1 Min Read
CM BSY Birthday

ಶಿವಮೊಗ್ಗ: ಅಭಿಮಾನಿಗಳ ಒತ್ತಾಯ ಮಾಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಎರಡು ದಿನಗಳ ಮುಂಚೆಯೇ ಹುಟ್ಟುಹಬ್ಬವನ್ನು ಇಂದು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳ ಆಸೆಯಂತೆ ಅವರು ತಂದಿದ್ದ ಕೇಕ್ ಸಿಎಂ ಕತ್ತರಿಸಿದರು.

ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಲುವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಶಿವಮೊಗ್ಗದ ವಿನೋಬನಗರ ಬಡಾವಣೆಯಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಯಡಿಯೂರಪ್ಪ ಅಭಿಮಾನಿಗಳು ಬಿಎಸ್ ವೈ ಅವರಿಗೆ ಮುಂಚಿತವಾಗಿ ಇಂದೇ ಕೇಕ್ ಕತ್ತರಿಸುವ ಮೂಲಕ 78ನೇ ಜನ್ಮ ದಿನ ಆಚರಿಸಿದರು. ಈ ವೇಳೆ ಅಭಿಮಾನಿಗಳು ಸಿಎಂಗೆ ಜೈಕಾರ ಕೂಗಿದರು.

bsy 2

ಇದೇ ತಿಂಗಳ 27ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನ ಆಚರಣೆಗೆ ಬಿಜೆಪಿ ಕಾರ್ಯಕರ್ತರು ಸಿದ್ಥತೆ ನಡೆಸಿಕೊಂಡಿದ್ದಾರೆ. ಮುಖ್ಯಮಂತ್ರಿ ಅವರ ಹುಟ್ಟುಹಬ್ಬ ಆಚರಣೆಯನ್ನು ಸಂಭ್ರಮದಿಂದ ಆಚರಿಸಲು ರಾಜ್ಯದೆಲ್ಲಡೆ ಈಗಾಗಲೇ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *