ಬೆಂಗಳೂರು: ಶಾಸಕಾಂಗ ಸಭೆಗೆ ಗೈರಾಗಿರುವ ಶಾಸಕರನ್ನು ಮನವೊಲಿಸಲು ಖುದ್ದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಖಾಡಕ್ಕೆ ಇಳಿದಿದ್ದಾರಂತೆ. ಬನ್ನಿ ಬ್ರದರ್ ಏನ್ ನಿಮ್ಮ ಪ್ರಾಬ್ಲಂ? ನಾನು ಸಾಲ್ವ್ ಮಾಡ್ತೀನಿ ಎಂದು ಶಾಸಕ ನಾಗೇಂದ್ರ ಜೊತೆ ಮಾತನಾಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಸಭೆಯ ಬಳಿಕ 76 ಶಾಸಕರಲ್ಲಿ ನಾಲ್ಕರಿಂದ ಐವರು ಆಪರೇಷನ್ ಕಮಲಕ್ಕೆ ಒಳಗಾಗ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಟ್ರಬಲ್ ಶೂಟರ್ ಸಚಿವ ಡಿ.ಕೆ.ಶಿವಕುಮಾರ್ ಭದ್ರಕೋಟೆ ಎಂದು ಕರೆಯಲಾಗುವ ಈಗಲ್ ಟನ್ ರೆಸಾರ್ಟ್ ನಲ್ಲಿ ಎಲ್ಲ ಕೈ ನಾಯಕರನ್ನು ಇರಿಸಿದ್ದಾರೆ.
Advertisement
Advertisement
ಸಭೆ ಬಳಿಕ ಮಾತನಾಡಿದ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ, ಇವತ್ತಿನ ಸಭೆಗೆ ನಾಲ್ವರು ಶಾಸಕರು ಬಂದಿರಲಿಲ್ಲ. ಆರೋಗ್ಯ ಸಮಸ್ಯೆಯಿದೆ ಅಂತ ಜಾಧವ್ ಪತ್ರ ಬರೆದಿದ್ದಾರೆ. ನಾಗೇಂದ್ರ ಕೋರ್ಟ್ ಕಲಾಪ ಇದೆ ಅಂತ ಹೇಳಿದ್ರು. ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಏನೂ ಹೇಳಿಲ್ಲ. ಹಾಗಾಗಿ, ನಾಲ್ವರಿಗೂ ನೊಟೀಸ್ ಕೊಡುತ್ತೇನೆ. ಉತ್ತರ ಬಂದ ಮೇಲೆ ಕ್ರಮ ಕೈಗೊಳ್ತೇನೆ. ಬಿಜೆಪಿ ವಿರುದ್ಧ ಕೆಂಡಕಾರಿ. ನಮ್ಮ ಶಾಸಕರು ಯಾವುದೇ ಆಮಿಷಕ್ಕೆ ಒಳಗಾಗಲ್ಲ. ಆದ್ರೂ ನಮ್ಮ ಎಚ್ಚರಿಕೆಗಾಗಿ ರೆಸಾರ್ಟ್ ಗೆ ಹೋಗ್ತಿದ್ದೇವೆ ಎಂದು ತಿಳಿಸಿದರು.
Advertisement
ಒಂದು ಕಡೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸಕ್ಸಸ್ ಆಗುತ್ತಿದ್ದಂತೆಯೇ ಬಿಜೆಪಿಯ ಆಪರೇಷನ್ ಕಮಲ ಠುಸ್ ಆಗಿದೆ. ಹರಿಯಾಣದ ಗುರುಗ್ರಾಮದಲ್ಲಿ ಒಂದು ವಾರದಿಂದ ರೆಸಾರ್ಟ್ ರಾಜಕಾರಣ ಮಾಡಿದ್ದ ಬಿಜೆಪಿ ಶಾಸಕರು ನಾಳೆ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಪ್ಲಾನ್ ಚೇಂಜ್ ಆಗಿದ್ದು ಅಲ್ಲೇ ಉಳಿತಾರೆ ಅನ್ನೋ ಮಾತೀ ಕೇಳಿ ಬಂದಿದೆ. ಕಾಂಗ್ರೆಸ್ ಸಿಎಲ್‍ಪಿ ಸಭೆ ಆರಂಭವಾಗ್ತಿದ್ದಂತೆಯೇ ಕಾಂಗ್ರೆಸ್ ನಾಯಕರಿಗಿಂತಲೂ ಬಿಜೆಪಿ ಪಾಳಯದಲ್ಲಿ ಕುತೂಹಲ ಆವರಿಸಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv