ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದುಕೊಂಡಿದ್ದು ಯಾಕೆ: ಉತ್ತರ ಕೊಟ್ಟ ಸಿಎಂ

Public TV
1 Min Read
cm lemon siddaramaiah

ಬೆಂಗಳೂರು: ಯಾರೋ ನಿಂಬೆ ಹಣ್ಣನ್ನು ಕೊಟ್ಟರು ಇಟ್ಟುಕೊಂಡಿದ್ದೆ ನಾನು ಮೂಢನಂಬಿಕೆಯನ್ನು ನಂಬುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.

ಮೌಢ್ಯ ನಿಷೇಧ ಕಾನೂನು ಮಾಡಿರುವ ಸಿಎಂ ನಿಂಬೆ ಹಣ್ಣು ಇಟ್ಟುಕೊಂಡು ಪ್ರಚಾರ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಯಾರೋ ನನಗೆ ನಿಂಬೆ ಹಣ್ಣನ್ನು ಕೊಟ್ಟರು. ಸುಮ್ಮನೆ ಇಟ್ಟುಕೊಂಡಿದ್ದೆ ಅದರಲ್ಲಿ ಏನೂ ಇಲ್ಲ ನಾನು ಯಾವುದನ್ನು ನಂಬಲ್ಲ ಎಂದು ಹೇಳಿದರು.

ಕೈಯಲ್ಲಿ ನಿಂಬೆಹಣ್ಣನ್ನು ಹಿಡಿದುಕೊಳ್ಳುವುದು ಮೂಢನಂಬಿಕೆಯಲ್ಲ ಎನ್ನುವ ವಿಚಾರಎಲ್ಲ ಕನ್ನಡಿಗರಿಗೂ ತಿಳಿದಿದೆ. ಗ್ರಾಮೀಣ ಭಾಗದ ಜನರು ಕೈಗೆ ನಿಂಬೆ ಹಣ್ಣು ನೀಡಿ ಸ್ವಾಗತಿಸುತ್ತಾರೆ. ಮೌಢ್ಯ ನಿಷೇಧ ಮಸೂದೆ ಅನುಮೋದನೆಯಾಗಿ ಕಾನೂನಾಗಿದೆ. ಅದು ಹಿಂದು ಸಂಪ್ರದಾಯಗಳನ್ನು ಕೀಳಾಗಿಸಿಲ್ಲ. ಟ್ವೀಟಿಸುವ ಮುನ್ನ ವಿಚಾರವನ್ನು ತಿಳಿದುಕೊಳ್ಳಿ ಎಂದು ಹೇಳಿ ಸಿಎಂ ಟ್ವೀಟ್ ಮಾಡಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೈಯಲ್ಲಿ ನಿಂಬೆಹಣ್ಣು ಹಿಡಿದು ಪ್ರಚಾರ ಯಾಕೆ: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

Share This Article