ಬೆಂಗಳೂರು: ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಮಧ್ಯೆ ವಾಕ್‍ಸಮರ, ಟ್ವಿಟರ್ ಸಮರ ನಡೆದಾಯ್ತು. ಈಗ ಕಾರ್ಟೂನ್ ಸಂಘರ್ಷದ ಸರದಿ. ಟ್ವಿಟರ್‍ನಲ್ಲಿ 3 ಕಾರ್ಟೂನ್‍ಗಳನ್ನ ಹರಿಬಿಟ್ಟಿರೋ ಸಿದ್ದರಾಮಯ್ಯ ಮೋದಿಯನ್ನ ಲೇವಡಿ ಮಾಡಿದ್ದಾರೆ.
ಕಾರ್ಟೂನ್ 1: ಲೂಟಿಕೋರರನ್ನ ಅರೆಸ್ಟ್ ಮಾಡಲು ಆಗದ ಮೋದಿ, ಲಂಡನ್‍ನಿಂದ ವಾಪಸ್ ಬರ್ತಿದ್ದ ಕಾರ್ತಿ ಚಿದಂಬರಂ ಅವರನ್ನ ಬಂಧಿಸಿದ್ದಾರೆ.
Advertisement
ಕಾರ್ಟೂನ್ 2: ಭ್ರಷ್ಟಾಚಾರದ ವಿಷಯದಲ್ಲಿ ಬಿಎಸ್‍ವೈ ನನ್ನ ದೂರುತ್ತಾರೆ. ನೀರವ್ ಮೋದಿ ಪ್ರಕರಣಕ್ಕೆ ಬ್ಯಾಂಕ್ & ಆಡಿಟರ್ ಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದೂರಿದ್ದಾರೆ. ಆದರೆ ಬ್ಯಾಂಕ್‍ಗಳ ರಾಷ್ಟ್ರೀಕರಣ ಮಾಡಿದ್ದಕ್ಕೆ ಮೋದಿ ಈಗ ಇಂದಿರಾಗಾಂಧಿ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಥಾಪಿಸಿದ ಲಾಲ್‍ಲಜಪತ್‍ರಾಯ್ ಅವರನ್ನು ದೂರಲಾ ಅಂತ ಯೋಚಿಸುತ್ತಿರಬೇಕು.
Advertisement
ಕಾರ್ಟೂನ್ 3: ನೋಟು ನಿಷೇಧ ಹೊತ್ತಲ್ಲಿ ದುಡ್ಡು ಜಮೆಗೆ ಸಾಮಾನ್ಯ ಗ್ರಾಹಕರು ಸರತಿ ಸಾಲಲ್ಲಿ ನಿಲ್ಬೇಕು. ಆದ್ರೆ ಇನ್ನೊಂದು ಕಡೆ ಕಾವಲುಗಾರನ ಅವತಾರದಲ್ಲಿರೋ ಮೋದಿಯೇ ಲೂಟಿಕೋರರರಾದ ನೀರವ್ ಮೋದಿ ಮತ್ತು ಮಲ್ಯನನ್ನು ದುಡ್ಡಿನ ಮೂಟೆಯೊಂದಿಗೆ ಕಳುಹಿಸಿ ಕೊಡುತ್ತಾರೆ. ಅಂತ ಮೂರು ಕಾರ್ಟೂನ್ ಮಾಡಿ ಮೋದಿಯನ್ನ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.
Advertisement
ಇದನ್ನೂ ಓದಿ: 4 ಪ್ರಶ್ನೆಗಳನ್ನು ಕೇಳಿ ಪ್ರಧಾನಿ ಮೋದಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ಸಿಎಂ ಸಿದ್ದರಾಮಯ್ಯ
Advertisement
ಈ ಹಿಂದೆ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪದ ಸಮಾವೇಶದಲ್ಲಿ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರ ಬಳಿಕ ಸಿಎಂ ಸಿದ್ದರಾಮಯ್ಯನವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಮೋದಿಯವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರು. ಸಿಎಂ ಟ್ವೀಟ್ ಗೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ನಾಯಕರು ನಾವು ನಿಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರ್ತೀವಿ ಅಂತಾ ಪ್ರತಿ ಸವಾಲು ಹಾಕಿದ್ದರು.
On election eve
all PM @narendramodi does is talks of corruption.
And he is good…..
at talking
When it comes to walking the talk he does the next thing
he is good at
????
(Cartoon courtesy: Satish Acharya) pic.twitter.com/lzECpFvtPq
— Siddaramaiah (@siddaramaiah) March 2, 2018
FM Jaitley blames Bankers/Auditors for the #NiravModi scam. @BSYBJP blames me for the scam ????. PM is silent. Maybe he is thinking of blaming Indira Gandhi for nationalizing the Banks or Lala Lajpat Rai for setting up the PNB
Blame anyone but themselves appears to be the mantra. pic.twitter.com/2JXfcWTbjQ
— Siddaramaiah (@siddaramaiah) February 21, 2018
Dear PM @narendramodi ರವರೆ, since you are fond of talking about commission let me ask you-
You made common people stand in queues to deposit their money in the Banks & then let #NiravModi run away with over 12,000 cr of people’s money.
What percent of people’s money is that? pic.twitter.com/whvsOIFYEi
— Siddaramaiah (@siddaramaiah) February 20, 2018