ಬೆಂಗಳೂರು: ಸಚಿವ ರಾಜಣ್ಣ (K.N.Rajanna) ಹನಿಟ್ರ್ಯಾಪ್ (Honeytrap) ಯತ್ನ ಪ್ರಕರಣದ ತನಿಖೆಗೆ ಎಳ್ಳು-ನೀರು ಬಿಡ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.
ಹೈಕಮಾಂಡ್ ಗಮನಕ್ಕೆ ತರಲು ಸಿಎಂ ಸಿದ್ದರಾಮಯ್ಯ (Siddaramaiah) ಮುಂದಾಗಿದ್ದಾರೆ. ಎರಡೂವರೆ ತಿಂಗಳ ಬಳಿಕ ಡೆಲ್ಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ, ನಾಳೆ ಮಧ್ಯಾಹ್ನ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲಿದ್ದಾರೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದು ವಿಜಯೇಂದ್ರ & ಡಿಕೆಶಿ, ಹನಿಟ್ರ್ಯಾಪ್ ಕೇಸ್‌ನಲ್ಲೂ ಇದೇ ಟೀಂ ಇದೆ – ಯತ್ನಾಳ್ ಬಾಂಬ್
ಹೈಕಮಾಂಡ್ ಭೇಟಿ ವೇಳೆ ರಾಜಣ್ಣ ಹನಿಟ್ರ್ಯಾಪ್ ರಾಜಕೀಯ ಬೆಳವಣಿಗೆಗಳ ಬಗ್ಗೆ ವರದಿ ನೀಡಲಿದ್ದು, ಹೈಕಮಾಂಡ್ ಅನುಮತಿ ಕೊಟ್ಟರಷ್ಟೇ ಉನ್ನತ ಮಟ್ಟದ ತನಿಖೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಷ್ಟೇ ನಡೆಸಿ ಪ್ರಕರಣ ಕೈಬಿಡುವ ತಂತ್ರ ಇದ್ದು, ಹೈಕಮಾಂಡ್ ಸೂಚನೆಯಂತೆ ಮುಂದುವರಿಯಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ತೆರವಾಗಿರುವ ನಾಲ್ಕು ಪರಿಷತ್ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಕುರಿತು ಚರ್ಚೆ ನಡೆಸಲಿದ್ದು, ಪಕ್ಷ ನಿಷ್ಠರು, ಸಮುದಾಯವಾರು ಆಯ್ಕೆ ವಿಚಾರದಲ್ಲಿ ಆಪ್ತರ ಪರ ಸಿದ್ಧರಾಮಯ್ಯ ಬ್ಯಾಟಿಂಗ್ ನಡೆಸುವ ಸಾಧ್ಯತೆ ಇದೆ. ಅಲ್ಲದೇ, ಸಂಪುಟ ಪುನಾರಚನೆ ಕುರಿತು ಹೈಕಮಾಂಡ್‌ಗೆ ಸಿಎಂ ಸ್ಪಷ್ಟನೆ ನೀಡುವ ಸಾಧ್ಯತೆ ಇದ್ದು, 30 ತಿಂಗಳವರೆಗೆ ಯಾವುದೇ ಕಾರಣಕ್ಕೂ ಸಂಪುಟ ಪುನಾರಚನೆ ಬೇಡ ಅಂತಿರುವ ಸಿಎಂ ಹೈಕಮಾಂಡ್‌ಗೂ ಮನವರಿಕೆ ಮಾಡಬಹುದು ಎನ್ನಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್ ಕುರಿತು ಸಿಬಿಐ ಅಥವಾ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಲಿ: ಎನ್.ರವಿಕುಮಾರ್