ಮೈಸೂರು: ನಾನು ಅಕ್ಷರ ಕಲಿಯದಿದ್ದರೆ ಚಡ್ಡಿ ಹಾಕಿಕೊಂಡು ಕುರಿ ಕಾಯುತ್ತಿದ್ದೆ, ಹೆಚ್ಚೆಂದರೆ ಹೊಲ ಉಳುತ್ತಿದೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಹೆಚ್.ಡಿ ಕೋಟೆಯಲ್ಲಿ (HD Kote) ಡಾ.ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರರ ಪುತ್ಥಳಿಯನ್ನು ಅನಾವರಣಗೊಳಿಸಿ, ನಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟಿಸಿ, ಸರ್ಕಾರದ ಸವಲತ್ತುಗಳನ್ನು ವಿತರಿಸಿದರು.ಇದನ್ನೂ ಓದಿ: ಟೇಕ್ವಾಂಡೋ ಸ್ಪರ್ಧೆಯಲ್ಲಿ 2 ಚಿನ್ನ ಗೆದ್ದ ಕನ್ನಡಿಗ ದಕ್ಷಿಣ್ ಸೂರ್ಯ
ಬಳಿಕ ಮಾತನಾಡಿದ ಅವರು, ಆಸೆಯೇ ದುಃಖಕ್ಕೆ ಮೂಲ. ಮನುಷ್ಯನಿಗೆ ಆಸೆ ಇರಬೇಕು. ದುರಾಸೆ ಇರಬಾರದು. ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕು ಹೊರತು ದ್ವೇಷಿಸಬಾರದು. ಇನ್ನೊಂದು ಧರ್ಮವನ್ನು ಪ್ರೀತಿಸುವ ಸಹಿಷ್ಣುತೆ ಇರಬೇಕು. ಇನ್ನೊಂದು ಧರ್ಮ ದ್ವೇಷಿಸಬಾರದು. ಜನ ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಮನುಷ್ಯರನ್ನು ದ್ವೇಷಿಸುತ್ತಾರೆ. ಪ್ರಾಣಿಗಳು ಹಾಗೂ ಮನುಷ್ಯರನ್ನು ಪ್ರೀತಿಸಿ ಎಂದರು.
ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಸಂವಿಧಾನದ ಆಶಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಜಾತಿ-ಧರ್ಮದ ಸಹಿಷ್ಣತೆ ಇರುವ, ಸರ್ವರನ್ನೂ ಒಳಗೊಳ್ಳುವ ಪರಂಪರೆ ನಮ್ಮದು. ಮನುಷ್ಯರನ್ನು ಜಾತಿ-ಧರ್ಮದ ನೆಪದಲ್ಲಿ ವಿರೋಧಿಸುವ ಕೆಲವರು ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಪ್ರಾಣಿಗಳನ್ನು ಪ್ರೀತಿಸುವುದು ತಪ್ಪಲ್ಲ, ಆದರೆ… pic.twitter.com/rXYp7AY1Xh
— Siddaramaiah (@siddaramaiah) May 12, 2025
ವಿದ್ಯಾವಂತರಲ್ಲಿ ಜಾತಿ ಮನಃಸ್ಥಿತಿ ಬೆಳೆದಿದೆ. ಬಸವಣ್ಣನನ್ನು ಪೂಜೆ ಮಾಡುತ್ತೇವೆ, ಜಯಂತಿ ಮಾಡುತ್ತೇವೆ. ಆದರೆ ಬಸವಣ್ಣ ಹೇಳಿದ್ದನ್ನು ಪಾಲಿಸುತ್ತಿಲ್ಲ. ನಾನು ಕುರುಬರ ಜಾತಿಯಲ್ಲಿ ಹುಟ್ಟಿದ್ದೀನಿ, ಅದೇ ಜಾತಿಯಲ್ಲಿ ಸಾಯಬೇಕು. ನಾನು ಬೇರೆ ಜಾತಿ ಆಗಲು ಸಾಧ್ಯವಿಲ್ಲ.ಇದು ಪಟ್ಟಭದ್ರ ಹಿತಾಸಕ್ತಿಗಳು ಮಾಡುವ ಕೆಲಸವಾಗಿದೆ. ನಾವು ಯಾವ ಜಾತಿಯಲ್ಲಿ ಹುಟ್ಟಿದ್ದೇವೋ ಅದೇ ಜಾತಿಯಲ್ಲೇ ನೇಣು ಹಾಕಿಕೊಳ್ಳಬೇಕಿದೆ. ಜಾತಿಗೆ ಚಲನೆಯೆ ಇಲ್ಲ. ಆದಿ ಕರ್ನಾಟಕ ಎಂದು ದಲಿತರ ಬಲ ಮತ್ತು ಎಡ ಇಬ್ಬರು ಕರೆಸಿಕೊಳ್ಳುತ್ತಾರೆ. ಹಾಗಾದರೆ ನಿಜವಾದ ಆದಿ ಕರ್ನಾಟಕ ಯಾರು ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗುತ್ತದೆ. ಆದಿ ಕರ್ನಾಟಕ ಎಂದು ಕರೆಸಿಕೊಳ್ಳುವವರು ಬಲ ಅಥವಾ ಎಡನಾ? ಆದಿ ದ್ರಾವಿಡ ಎಂದು ಕರೆಸಿಕೊಳ್ಳುವವರು ಬಲನಾ? ಎಡನಾ? ಎಂಬುದು ಗೊತ್ತಾಗಬೇಕಿದೆ ಎಂದರು.
ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಬೇಡ್ಕರರ ಪುತ್ಥಳಿಯನ್ನು ಅನಾವರಣಗೊಳಿಸಿ, ನಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೈದು, ಸರ್ಕಾರದ ಸವಲತ್ತುಗಳನ್ನು ವಿತರಿಸಿದೆ. pic.twitter.com/O3nGWaZtuN
— Siddaramaiah (@siddaramaiah) May 12, 2025
ನಾನು ಅಕ್ಷರ ಕಲಿಯದಿದ್ದರೆ ಚಡ್ಡಿ ಹಾಕಿಕೊಂಡು ಕುರಿ ಕಾಯುತ್ತಿದ್ದೆ. ಜಾಸ್ತಿ ಅಂದರೆ ಹೊಲ ಉಳುತ್ತಿದ್ದೆ ಅಷ್ಟೇ. ನನ್ನ ಜೊತೆ ವೀರ ಮಕ್ಕಳ ಕುಣಿತಿದ್ದ ಇಬ್ಬರು ಮಾತ್ರ ಓದಿದ್ದರು. ಉಳಿದವರು ಓದಲಿಲ್ಲ. ನಾನು ಓದಿದ ಕಾರಣ ಇಲ್ಲಿ ತನಕ ಬಂದೆ. ನನ್ನ ಅಣ್ಣ, ತಮ್ಮ, ಅಕ್ಕಂದಿರು ಯಾರು ಓದಲಿಲ್ಲ. ಅವರೆಲ್ಲಾ ಅಲ್ಲೇ ಉಳಿದು ಬಿಟ್ಟರು. ಯಾವುದಕ್ಕೂ ಹಣೆಬರಹ, ಪೂರ್ವಜನ್ಮದ ಪಾಪ-ಪುಣ್ಯ ಯಾವುದು ನಂಬಬೇಡಿ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಮಾನ ಮಾರ್ಯಾದೆ ಇಲ್ಲ. ನಮ್ಮ ಸರ್ಕಾರವನ್ನು ಪಾಪರ್ ಸರಕಾರ ಎಂದು ಟೀಕಿಸುತ್ತಾರೆ. ಆದರೆ ದುಡ್ಡಿಲ್ಲದೆ ಇಷ್ಟು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯನಾ? ಎಂಎಲ್‌ಎ ಗಳಿಗೆ ಈ ವರ್ಷ 50 ಕೋಟಿ ರೂ. ಅನುದಾನ. ಕೊಡಲು 8 ಸಾವಿರ ಕೋಟಿ ರೂ. ಎತ್ತಿಟ್ಟುಕೊಂಡಿದ್ದೇನೆ. ಪಾಪರ್ ಸರ್ಕಾರ ಇಷ್ಟು ಕೆಲಸ ಮಾಡಲು ಸಾಧ್ಯ ಎಂದು ಕಿಡಿಕಾರಿದರು.ಇದನ್ನೂ ಓದಿ: ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಮೋದಿ