ಬೆಂಗಳೂರು: ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್ ಗೂಂಡಾಗಿರಿಯೂ ಹೆಚ್ಚಾಗ್ತಿದೆ. ಎರಡು, ಮೂರು ದಿನಗಳಿಂದ ಸಿಎಂ ಬೆಂಬಲಿಗರು, ಆಪ್ತರು, ಶಾಸಕರ ಮಕ್ಕಳ ಗೂಂಡಾಗಿರಿ ನೋಡಿದ್ದಾಯ್ತು. ಇದೀಗ ಸಿಎಂ ಪುತ್ರನ ಗೆಳೆಯರ ಸರದಿ. ಸಿಎಂ ಮಗ ಯತೀಂದ್ರ ಪಾಲುದಾರಿಕೆ ಹೊಂದಿದ್ದ ಶಾಂತ ಇಂಡಸ್ಟ್ರೀಸ್‍ನ ನಿರ್ದೇಶಕ ರಾಜೇಶ್ ಗೌಡ ಮತ್ತು ಕಾರ್ನರ್ ಬ್ರೋಕರ್ ಸೂರಿ ಗೂಂಡಾಗಿರಿ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಹೆಬ್ಬಾಳದ ಸಮೀಪ ಬಿಡಿಎ ಅಕ್ರಮವಾಗಿ ಮಂಜೂರು ಮಾಡಿದ್ದ ನಿವೇಶನದ ಪಕ್ಕದ ಜಮೀನಿನ ಬೇಲಿಯನ್ನು ಜೆಸಿಬಿ ಮೂಲಕ ತೆರವು ಮಾಡಿ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಮಾಲೀಕ ಎಚ್‍ಬಿ ಶಿವರಾಂಗೆ ಸಿಎಂ ಸಿದ್ದರಾಮಯ್ಯ ಹೆಸರನ್ನು ಹೇಳಿ ಧಮ್ಕಿ ಹಾಕಿದ್ದಾರೆ. ಜೆಸಿಬಿ ಮೂಲಕ ಡಿಕ್ಕಿ ಹೊಡೆಸಲು ಯತ್ನಿಸಿದ್ದಾರೆ. ಸುಮಾರು 50 ರೌಡಿಗಳನ್ನ ಛೂ ಬಿಟ್ಟು ಬೆದರಿಕೆ ಹಾಕಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ಅಕ್ರಮವಾಗಿ ಶಿವರಾಂ ಜಮೀನಿನಲ್ಲಿ ಕಾಮಗಾರಿ ಪ್ರಾರಂಭಿಸಿದೆ ರಾಜೇಶ್ ಗೌಡ ಮತ್ತು ಬ್ರೋಕರ್ ಸೂರಿ ಗ್ಯಾಂಗ್. ನಿವೇಶನ ವಿವಾದ ಹಿನ್ನೆಲೆಯಲ್ಲಿ ಕೋರ್ಟ್ ಯಥಾಸ್ಥಿತಿ ಕಾಪಾಡಿಕೊಳ್ಳಿ ಎಂದು ಹೇಳಿದ್ರೂ ಸಿಎಂ ಪುತ್ರನ ಸ್ನೇಹಿತ ದಬ್ಬಾಳಿಕೆ ನಡೆಸಿದ್ದಾರೆ. ಈ ಬಗ್ಗೆ ಹೆಚ್‍ಬಿ ಶಿವರಾಮ್ ಕುಟುಂಬಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ. ಈ ವಿಚಾರದ ಬಗ್ಗೆ ಬ್ರೋಕರ್ ಸೂರಿ ಅವರ ಪ್ರತಿಕ್ರಿಯೆ ಪಡೆಯುವ ವೇಳೆ ಪಬ್ಲಿಕ್ ಟಿವಿಯ ಮೇಲೆ ದಬ್ಬಾಳಿಕೆ ಮಾಡುವ ರೀತಿ ಮಾತನಾಡಿದ್ದಾರೆ.
Advertisement
ಈ ಹಿಂದೆ ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ರಾಶಿ ರಾಶಿ ನೋಟಿನ ಕಂತೆಗಳನ್ನು ಇಟ್ಟು ಬ್ರೋಕರ್ ಸೂರಿ ಆಲಿಯಾಸ್ ಕಾರ್ನರ್ ಸೂರಿ ಸುದ್ದಿಗೆ ಗ್ರಾಸವಾಗಿದ್ದರು. ಇದನ್ನೂ ಓದಿ: ನೋಟಿನ ಕಂತೆಗಳ ಮೇಲೆ ವರಮಹಾಲಕ್ಷ್ಮಿ ಪೂಜಿಸಿದ ಬಿಡಿಎ ಬ್ರೋಕರ್
Advertisement
ಏನಿದು ಭೂ ವಿವಾದ?
ಸಿಎಂ ಒತ್ತಡಕ್ಕೆ ತಲೆವಬಾಗಿದ ಬಿಡಿಎ ಯತೀಂದ್ರ ಪಾಲುದಾರಿಕೆಯ ಶಾಂತಾ ಇಂಡಸ್ಟ್ರೀಸ್‍ಗೆ ಇಂಡಸ್ಟ್ರೀಸ್‍ಗೆ ಹೆಬ್ಬಾಳದ ಫ್ಲೈ ಓವರ್ ಬಳಿ 50 ಕೋಟಿ ರೂ. ಮೌಲ್ಯದ 2.19 ಎಕರೆ ಜಮೀನನ್ನು ನೀಡಿತ್ತು. ಇದೇ ಸರ್ವೆ ನಂ 110/2ರಲ್ಲಿ 19 ಗುಂಟೆ ಜಮೀನನ್ನು ಶಿವರಾಮ್ ಸಹೋದರರು ಹೊಂದಿದ್ದು ವಿವಾದ ದೊಡ್ಡದಾಗುತ್ತಲೇ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಸೂಚಿತ್ತು. ಕೋರ್ಟ್ ಸೂಚನೆ ಉಲ್ಲಂಘಿಸಿ ಜೆಸಿಬಿ ತಂದು ರಾಜೇಶ್ ಗೌಡ, ಬ್ರೋಕರ್ ಸೂರಿಯ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ ಎನ್ನುವುದು ಈಗ ಬಂದಿರುವ ಆರೋಪ.
ಭೂ ವಿವಾದದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಬ್ರೋಕರ್ ಸೂರಿ, ದೌರ್ಜನ್ಯಕ್ಕೆ ಒಳಗಾದ ದಯಾನಂದ್ ಮಾತನಾಡಿದ್ದು ಆ ವಿಡಿಯೋಗಳನ್ನು ಇಲ್ಲಿ ನೀಡಲಾಗಿದೆ.
https://youtu.be/iBuK_oBxQdU
https://youtu.be/PDV4D4j53aQ