– ಸಿದ್ದರಾಮಯ್ಯ ಬಜೆಟ್ ಮಂಡಿಸುವಾಗ ಸದನದಿಂದ ಹೊರನಡೆದಿದ್ದ ಬಿಜೆಪಿ ನಾಯಕರು
ಬೆಂಗಳೂರು: 1983 ರಿಂದ ನಾನು ವಿಧಾನಸಭೆಯಲ್ಲಿ ಇದ್ದೇನೆ. ಆಡಳಿತ ಮತ್ತು ವಿರೋಧ ಪಕ್ಷದಲ್ಲೂ ಇದ್ದೆ. ಬಜೆಟ್ ಮಂಡಿಸುವಾಗ ವಾಕೌಟ್ ಮಾಡಿದ ನಿದರ್ಶನ ಇಲ್ಲ ಎಂದು ಬಿಜೆಪಿ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ಬಜೆಟ್ ಮಂಡನೆ ವೇಳೆ ಬಿಜೆಪಿ ನಾಯಕರು ವಾಕ್‌ಔಟ್ ಮಾಡಿದ್ದಕ್ಕೆ ಕಿಡಿಕಾರಿದ ಸಿಎಂ, 1983 ರಿಂದ ನಾನು ವಿಧಾನಸಭೆಯಲ್ಲಿ ಇದ್ದೇನೆ. ಆಡಳಿತ ಮತ್ತು ವಿರೋಧ ಪಕ್ಷ ಎರಡರಲ್ಲೂ ಇದ್ದೆ. ಬಜೆಟ್ ಮಂಡನೆ ಮಾಡುವಾಗ ಯಾರು ಕೂಡ ವಾಕ್‌ಔಟ್ ಮಾಡಿರಲಿಲ್ಲ ಯಾರು ವಾಕ್ ಔಟ್ ಮಾಡಿರಲಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯ ಬಜೆಟ್‌ನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್
Advertisement
Advertisement
ಗ್ಯಾರಂಟಿ ಕೊಟ್ಟು ಆರ್ಥಿಕವಾಗಿ ದಿವಾಳಿ ಆಗಿದೆ. ಇದು ಬಿಟ್ಟಿ ಗ್ಯಾರಂಟಿ ಅಂತ (ಬಿಜೆಪಿ) ಹೇಳಿದರು. ಅದರೆ ಬಜೆಟ್ ಗಾತ್ರ 13% ಹೆಚ್ಚಳ ಆಗಿದ್ದು, ಆರ್ಥಿಕತೆ ಸುಭದ್ರವಾಗಿದೆ. 36 ಸಾವಿರ ಕೋಟಿ ಗ್ಯಾರಂಟಿ ಕೊಟ್ಟರು. ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬರ ಬಂದಿದೆ. ಒಟ್ಟು 35 ಸಾವಿರ ಕೋಟಿ ನಷ್ಟ ಆಗಿದೆ. ಕೇಂದ್ರಕ್ಕೆ 18,171 ಕೋಟಿ ಬರ ಪರಿಹಾರ ನಿಯಮದ ಪ್ರಕಾರ, ಎನ್‌ಡಿಆರ್‌ಎಫ್ ಪ್ರಕಾರ ಕೇಳಿದ್ದೇವೆ. ಇದು ನಮ್ಮ ತೆರಿಗೆ ಹಣ ಅದಕ್ಕೆ ಕೇಳ್ತಿದ್ದೇವೆ. ಇದುವರೆಗೂ ಕೇಂದ್ರ ಸರ್ಕಾರ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ ಎಂದು ಬೇಸರಿಸಿದ್ದಾರೆ.
ನಾನು ಬಜೆಟ್ ಓದೋಕೆ ಪ್ರಾರಂಭ ಮಾಡಿದಾಗ ಸುನೀಲ್ ಏನಿಲ್ಲ… ಏನಿಲ್ಲ ಅಂತ ಹೇಳಿದ್ರು. ಅವರ ತಲೆಯಲ್ಲಿ ಏನು ಇಲ್ಲ. ಅವರಿಗೆ ಸಂವಿಧಾನ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಬಿಜೆಪಿ ಅವರಿಗೆ ರಾಜಕೀಯ ಮಂಜು ಆಗಿದೆ. ಕಾಮಾಲೆ ರೋಗದವರಿಗೆ ಕಾಣೋದೆಲ್ಲ ಹಳದಿಯಂತೆ ಅವರಿಗೆ ಆಗಿದೆ. ಬಿಜೆಪಿ ಅವರು ರಾಜಕೀಯ ಮಾಡಲಿ. ಯಾವುದೇ ಟೀಕೆಗಳು, ಆರೋಗ್ಯಕರವಾಗಿ ಇರಬೇಕು. ಟೀಕೆ ಮಾಡೋದಕ್ಕೆ ಇವರು ಟೀಕೆ ಮಾಡ್ತಾರೆ. ಏನಿಲ್ಲ.. ಏನಿಲ್ಲ.. ಅಂತ ಶುರು ಮಾಡಿದ್ರು. ಆಮೇಲೆ ಪ್ಲೇಕಾರ್ಡ್ ಹಿಡಿದುಕೊಂಡು ಬಂದಿದ್ದರು. ಇದು ಪ್ಲ್ಯಾನ್ ಮಾಡಿದ್ದು ಅಲ್ಲವಾ? ನಾನು ವಸ್ತುಸ್ಥಿತಿ ಹೇಳಿದ್ರೆ ಅವರಿಗೆ ನುಂಗಲಾರದ ತುತ್ತು. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದರು ಎಂಬ ಗಾದೆಯಂತೆ ಬಿಜೆಪಿಗೆ. ಬಿಜೆಪಿ ಅವರಿಗೆ ಸತ್ಯ ಹೇಳಿದ್ರೆ ತಡೆದುಕೊಳ್ಳಲು ಆಗೊಲ್ಲ. ಕರ್ನಾಟಕಕ್ಕೆ ಆಗಿದ ಅನ್ಯಾಯ ಹೇಳೋದು ನನ್ನ ಜವಾಬ್ದಾರಿ. ಕೇಂದ್ರದಿಂದ ಆದ ಅನ್ಯಾಯ ಹೇಳೋದು ನನ್ನ ಜವಾಬ್ದಾರಿ. ಬಿಜೆಪಿ ಅವರು ಕೋಲೆ ಬಸವನ ತರಹ ತಲೆ ಅಳ್ಳಾಡಿಸದೇ ಕೇಂದ್ರದ ಬಳಿ ಕೇಳಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಜೆಟ್ ಮೊತ್ತ ನೋಡಿ ಬಿಜೆಪಿಗರಿಗೆ ಕುಳಿತುಕೊಳ್ಳಲು ಆಗದೆ ಕೈ ಹಿಸುಕಿಕೊಂಡಿದ್ದಾರೆ: ಡಿಕೆಶಿ