– ನನ್ನ ನೋಡಿದ್ರೆ ಬ್ರಾಂಡ್ ಕಾಣಲ್ವಾ?
ಬೆಂಗಳೂರು: ಬಜೆಟ್ (Karnataka Budget 2024) ಮೊತ್ತ 3 ಲಕ್ಷ ಕೋಟಿ 71 ಸಾವಿರ ರೂ. ಮುಟ್ಟಿದ್ದು, ಈ ನಂಬರ್ ನೋಡಿ ವಿರೋಧ ಪಕ್ಷದವರು ಕುಳಿತುಕೊಳ್ಳಲು ಆಗದೆ, ಇಂಥ ಬಜೆಟ್ ಕೊಡಲು ಆಗಲಿಲ್ಲ ಎಂದು ಕೈ ಹಿಸುಕಿಕೊಂಡ್ರು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಬಿಜೆಪಿಗರ (BJP) ವಿರುದ್ಧ ವ್ಯಂಗ್ಯವಾಡಿದ್ದಾರೆ.
Advertisement
ಬಜೆಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಬಜೆಟ್‍ಗೆ ಅವಮಾನ ಮಾಡಿ ಹೋಗಿರಲಿಲ್ಲ. ಬಜೆಟ್ ಬೈಕಾಟ್ ಮಾಡೋದು ರಾಜ್ಯದ ಜನತೆಗೆ ಮಾಡಿದ ಅವಮಾನವಾಗಿದೆ. ಅಲ್ಲದೇ ಅನ್ನಭಾಗ್ಯ, ಗೃಹಜ್ಯೋತಿ, ಫಲಾನುಭವಿಗಳಿಗೆ, ಫ್ರೀಯಾಗಿ ಬಸ್ಸಲ್ಲಿ ಓಡಾಡುವವರಿಗೆ ಹಾಗೂ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಸಿಹಿ ಸುದ್ದಿ – ಜಿಲ್ಲೆಗೊಂದು ಡೇ ಕೇರ್ ಕಿಮೋಥೆರಪಿ ಕೇಂದ್ರ
Advertisement
ಈ ಬಜೆಟ್ ಜನರ ಬದುಕನ್ನು ಬದಲಾಯಿಸುವ ಬಜೆಟ್ ಆಗಿದೆ. ನೀರಾವರಿ, ಕಳಸಾ ಬಂಡೂರಿಗೆ ಟೆಂಡರ್ ಕರೆದಿದ್ದೇವೆ, ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಬೆಂಗಳೂರಿಗೆ ಐದು ಟೌನ್ ಶಿಪ್ ಕೊಟ್ಟಿದ್ದೇವೆ. ಜನರ ಮನೆ ಬಾಗಿಲಿಗೆ ಅಕ್ಕಿ ತಲುಪಿಸುತ್ತಿದ್ದೇವೆ ಎಂದು ಬಜೆಟ್‍ನ್ನು ಸಮರ್ಥಿಸಿಕೊಂಡಿದ್ದಾರೆ.
Advertisement
Advertisement
ಯಾರ ಮೇಲೂ ಹೆಚ್ಚಿಗೆ ತೆರಿಗೆ ಹೊಣೆ ಕೊಟ್ಟಿಲ್ಲ, ಗ್ಯಾರಂಟಿ ಸ್ಕೀಮ್ ಕೊಟ್ಟಿದ್ದೇವೆ. ನನ್ನ ಇಲಾಖೆ ಬಗ್ಗೆ ಮಾತನಾಡ್ತಾ ಇಲ್ಲ, ನಾನು ಸಮಗ್ರ ಕಲ್ಯಾಣ ಕರ್ನಾಟಕದವನು. ಇದು ರಾಜ್ಯದ ಬಜೆಟ್, ಇದರಿಂದ ಬಿಜೆಪಿ ಶಾಸಕರಿಗೂ ಖುಷಿಯಾಗಿದೆ ಅವರಿಗೆ ಹೇಳಿಕೊಳ್ಳಲು ಆಗಲ್ಲ ಎಂದಿದ್ದಾರೆ.
ನನ್ನ ಇಲಾಖೆ ಬಿಡಿ, ರಾಜ್ಯದ ಬಗ್ಗೆ ನೋಡಿ. ಯಡಿಯೂರಪ್ಪ ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ. ಅವರ ಕ್ಷೇತ್ರಕ್ಕೂ ಮಾಡಿದ್ದೇವೆ. ಎಸ್.ಟಿ ಸೋಮಶೇಖರ್ ಸಹ 110 ಊರುಗಳಿಗೆ ನೀರು ಕೇಳಿದ್ರು, ಅವರಿಂದಲೇ ಸೇರಿಸಿದ್ದೇವೆ. ಇದು ಫಸ್ಟ್ ಕ್ಲಾಸ್ ಬಜೆಟ್ ಆಗಿದೆ. ನಮ್ಮಲ್ಲಿರೋ ಆರ್ಥಿಕ ಶಕ್ತಿ, ಆರ್ಥಿಕ ಶಿಸ್ತಿನ ಮೇಲೆ ಸಾಲ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಜೆಟ್‍ನಲ್ಲಿ ಬ್ರಾಂಡ್ ಬೆಂಗಳೂರು ಕಾಣ್ತಿಲ್ಲ ಎನ್ನುವ ಹೆಚ್‍ಡಿಕೆ ಆರೋಪಕ್ಕೆ, ನನ್ನ ನೋಡಿದ್ರೆ ಬ್ರಾಂಡ್ ಕಾಣ್ತಿಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರಿಗೆ ಅಸೆಂಬ್ಲಿಗೆ ಬರಲು ಆಗಿಲ್ಲ. ಅವರು ಬಂದು ಕೂತು ನೋಡಿದ್ರೆ ಗೊತ್ತಾಗಿರೋದು. ಎಲ್ಲೋ ಕೂತು ನೋಡಿ, ಮಾಧ್ಯಮಕ್ಕೆ ಹೇಳಿಕೆ ಕೊಡ್ತಾರೆ. ಬಂದು ನೋಡಿದ್ರೆ ನಾವು ಎಂತಹ ಬಜೆಟ್ ಕೊಡ್ತೀವಿ ಎಂದು ಗೊತ್ತಾಗುತ್ತಿತ್ತು ಎಂದಿದ್ದಾರೆ.
ರಾಜ್ಯಸಭೆ ನಾಮಪತ್ರ ವಿಚಾರವಾಗಿ, ಕುಪೇಂದ್ರ ರೆಡ್ಡಿ ಹಾಕಿದಾರಲ್ಲಾ. ಅವರು ಗೆದ್ದಂಗೆ ಎಂದಿದ್ದಾರೆ. ಇದನ್ನೂ ಓದಿ: Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?