ಮಂಡ್ಯ: ಮಹಾನ್ ಪೆದ್ದರಾಗಿರುವ ಕೆಎಸ್ ಈಶ್ವರಪ್ಪ ಅವರ ನಾಲಿಕೆ ಹಾಗೂ ಮೆದುಳಿಗೆ ಸಂಬಂಧ ತಪ್ಪಿ ಹಲವು ದಿನಗಳಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ತೂಬಿನಕೆರೆ ಬಳಿ ಮಾತನಾಡಿದ ಅವರು ಈಶರಪ್ಪ ಅವರು ಏನೇನೋ ಮಾತನಾಡುತ್ತಾರೆ. ಅವರಿಗೆ ಬ್ರೇನ್ ಇಲ್ಲ. ಅವರ ನಾಲಿಗೆ ಹಾಗೂ ಬ್ರೇನ್‍ಗೆ ಸಂಬಂಧ ಇಲ್ಲದಿರುವುದರಿಂದ ಏನೇನೋ ಮಾತನಾಡುತ್ತಾರೆ ಎಂದು ಹೇಳಿ ಟಾಂಗ್ ನೀಡಿದರು.
Advertisement
Advertisement
ಈ ವೇಳೆ ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲಿನ ಚಾಕು ಇರಿತದ ಬಗ್ಗೆ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತರಿಗೆ ರಕ್ಷಣೆ ಇದೆ. ಆದರೆ ಆಗಬಾರದ ಘಟನೆ ನಡೆದಿದೆ. ಲೋಕಾಯುಕ್ತ ಕಚೇರಿಯಲ್ಲಿ ಭದ್ರತೆಯ ಲೋಪದೋಷದಿಂದ ಘಟನೆ ಸಂಭವಿಸಿದೆ. ಈ ಕುರಿತು ತನಿಖೆ ನಡೆಸಲು ಗೃಹ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೇ ಸೂಕ್ತ ಭದ್ರತೆ ನೀಡಲು ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: ಇಂದು ಸಂಜೆಯೊಳಗೆ ಸಿಎಂ ಸಿದ್ದರಾಮಯ್ಯ ಕೊಲೆ ಆಗಬಹುದು: ಕೆ.ಎಸ್.ಈಶ್ವರಪ್ಪ
Advertisement
ಲೋಕಾಯುಕ್ತರ ಮೇಲಿನ ದಾಳಿಯ ವಿಚಾರವನ್ನು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಅದನ್ನು ಬಿಟ್ಟು ಬೇರೆ ಏನು ಮಾಡಲು ಬರುತ್ತೆ. ನನ್ನನ್ನು ರಾಜೀನಾಮೆ ಕೇಳಲು ಬಿಜೆಪಿಯವರು ಯಾರು? ಅವರಿಗೆ ಸಂವಿಧಾನ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ಇದೇ ವೇಳೆ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ ಒಂದು ಸ್ಥಾನ ಬಿಟ್ಟು ಕೊಡುವ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಬಿಬಿಎಂಪಿ ಅಧಿಕಾರ ಹಂಚಿಕೆಗೂ ರಾಜ್ಯಸಭೆ ಚುನಾವಣೆಗೂ ಸಂಬಂಧವಿಲ್ಲ. ರಾಜ್ಯಸಭೆಯಲ್ಲಿ ಮೂರು ಸ್ಥಾನ ಗೆಲ್ಲಲು ನಮಗೆ ಅವಕಾಶವಿದೆ. ಹೀಗಿರುವಾಗ ಬೇರೆಯವರಿಗೆ ಒಂದು ಸ್ಥಾನ ಏಕೆ ಬಿಟ್ಟುಕೊಡಬೇಕು. ಬೇಡ ಅಂದರೆ ಬೇಕಾದರೆ ಬಿಬಿಎಂಪಿ ಮೈತ್ರಿ ವಾಪಸ್ ಪಡೆದುಕೊಳ್ಳಲಿ ಎಂದು ಹೇಳಿದರು.
ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸುವ ವಿಚಾರ ಹಾಗೂ ರೈತ ಸಂಘಕ್ಕೆ ಬೆಂಬಲ ನೀಡುವ ಬಗ್ಗೆ ಪುಟ್ಟಣ್ಣಯ್ಯ ಪುತ್ರ ಹಾಗೂ ಅವರ ಕುಟುಂಬದ ಜೊತೆ ಮೊದಲು ಮಾತುಕತೆ ನಡೆಸಬೇಕು ಎಂದು ತಿಳಿಸಿದರು.
https://www.youtube.com/watch?v=EuvwSkRGdfc