ಬೆಂಗಳೂರು: ಬಿಜೆಪಿಯವರು ಮೀಸಲಾತಿಯ ವಿರೋಧಿಗಳು. ಮಂಡಲ್ ಕಮೀಷನ್ ವಿರೋಧಿಗಳು. ಸಂವಿಧಾನದ 74ನೇ ತಿದ್ದುಪಡಿ ವಿರೋಧಿಗಳು. ದಲಿತರು ಮನೆಗೆ ಹೋಗಿ ಹೋಟೆಲ್ ಊಟ ಮಾಡ್ತಾರೆ. ದಲಿತರ ಹೆಣ್ಣು ಮಕ್ಕಳು ಮದುವೆಯಾಗಿ ಅಂತ ಹೇಳಿದ ಕೂಡಲೇ ದಲಿತರ ಮನೆಗೆ ಹೋಗುವುದೇ ಬಿಟ್ಟರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಕೆಪಿಸಿಸಿ, ಒಬಿಸಿ ಘಟಕದ ವತಿಯಿಂದ ಪುರಭವನದಲ್ಲಿ ಮಾಜಿ ಸಿಎಂ ದಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಶ್ವತ ಹಿಂದುಳಿದ ವಗ9ಗಳ ಆಯೋಗ ಮಾಡಬೇಕು ಅಂತ ಸುಪ್ರೀಂ ಕೋಟ್9 ಹೇಳಿತ್ತು. ಆದರೆ ರಾಜ್ಯದ ಆಯೋಗಗಳ ಅಧಿಕಾರ ಕಿತ್ತುಕೊಳ್ಳುವ ಹುನ್ನಾರ ಬಿಜೆಪಿ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ಖಂಡಿಸಬೇಕು ಎಂದರು.
Advertisement
ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಸಮುದಾಯವನ್ನು ಸೇರಿಸಬೇಕೆಂಬ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರಬೇಕು. ಆದರೆ ಈಗ ಕೇಂದ್ರ ಕೇಂದ್ರ ಸರ್ಕಾರ ಈ ಅಧಿಕಾರವನ್ನೇ ಕಿತ್ತುಕೊಳ್ಳಲು ಹೊರಟಿದೆ. ಇದನ್ನೇ ನಾವು ವಿರೋಧಿಸುತ್ತಿರುವುದು. ಆದರೆ ಅಮಿತ್ ಶಾ ಅವರು ನಾವು ಮೀಸಲಾತಿ ವಿರೋಧಿಗಳು ಅಂತ ಹೇಳಿದ್ದಾರೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಬಿಲ್ ತರುವುದಕ್ಕೆ ಬಿಜೆಪಿ ಹೊರಟಿದೆ. ಆ ಮೂಲಕ ಬಿಜೆಪಿಯಿಂದ ಆಯೋಗದ ಅಧಿಕಾರ ಕಿತ್ತುಕೊಳ್ಳುವ ಹುನ್ನಾರ ನಡೀತಿದೆ ಎಂದರು.
Advertisement
ಈಶ್ವರಪ್ಪ ಹಿಂದುಳಿದ ವರ್ಗಗಳಿಗೆ ರಾಯಣ್ಣ ಬ್ರಿಗೇಡ್ ಅಂತ ಮಾಡಿದರು. ಆದರೆ ಹಿಂದುಳಿದ ವರ್ಗಗಳಿಗೆ ಈಶ್ವರಪ್ಪ ಏನೂ ಮಾಡಲಿಲ್ಲ. ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಮಾಜಿ ರಾಜ್ಯಪಾಲರಾದ ನ್ಯಾ.ರಾಮಾಜೋಯಿಸ್ ಸುಪ್ರೀಂ ಕೋರ್ಟಿನಲ್ಲಿ ಮೀಸಲಾತಿ ಬೇಡ ಅಂತ ಅರ್ಜಿ ಹಾಕಿದ್ದು ಬಿಜೆಪಿಯವರಿಗೆ ರಾಜಗುರು ಇದ್ದ ಹಾಗೆ. ಆದರೆ ಅದೃಷ್ಟವಶಾತ್ ರಾಮಜೋಯಿಸ್ ಅರ್ಜಿ ಕೋರ್ಟಿನಲ್ಲಿ ತಿರಸ್ಕೃತವಾಯಿತು. ಇಲ್ಲದಿದ್ದರೆ ಹಿಂದುಳಿದ ವರ್ಗಗಳಿಗೆ ತುಂಬಾ ಅನ್ಯಾಯವಾಗತ್ತಿತ್ತು. ಬಿಜೆಪಿಯವರಿಗೆ ಹಿಂದುಳಿದ ವರ್ಗಗಳ ಹೆಸರು ಹೇಳುವ ನೈತಿಕತೆ ಇಲ್ಲ. ಹಿಂದುಳಿದ ವರ್ಗಗಳು ಬಿಜೆಪಿ ಕಡೆಗೆ ತಲೆ ಹಾಕಿಯೂ ಮಲಗಬಾರದು ಎಂದು ಹೇಳಿದರು.
Advertisement
ಕೆಪಿಸಿಸಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಸಾಧಕರಿಗೆ ಅರಸು ಗೌರವ ಪುರಸ್ಕಾರವನ್ನು ನೀಡಲಾಯಿತು. ಸಾಹಿತಿ ಚನ್ನಣ್ಣ ವಾಲೀಕಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ ವಾಡ್ ಮತ್ತು ವೇದಾ ಕೃಷ್ಣಮೂರ್ತಿಗೆ ಗೌರವ ಪುರಸ್ಕಾರ ನೀಡಿದರು. ಈ ವೇಳೆ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ಸಂಸದರಾದ ಮುನಿಯಪ್ಪ, ಸಚಿವ ಕೆ ಜೆ ಜಾರ್ಜ್, ಎಂಎಲ್‍ಸಿ ಬೋಸ್ ಇದ್ದರು.
Advertisement
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿದ ಸಂದರ್ಭ. pic.twitter.com/fFTFVue4aL
— CM of Karnataka (@CMofKarnataka) August 20, 2017
https://twitter.com/CMofKarnataka/status/899168624581017601
https://twitter.com/INCKarnataka/status/899246070084943872