ಧಾರವಾಡ: ಕಾಂಗ್ರೆಸ್, ಬಿಜೆಪಿ ಸರ್ಕಾರದ ಅಭಿವೃದ್ಧಿ ಬಗ್ಗೆ ಒಂದೇ ವೇದಿಕೆ ಮೇಲೆ ಚರ್ಚೆ ಮಾಡಲು ಬರುತ್ತಿರಾ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಸಾಧನಾ ಸಮಾವೇಶದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಬಾರಿ ನಾನು ಬಜೆಟ್ ಪುಸ್ತಕ ನೋಡಿಯೋ ಬಜೆಟ್ ಮಂಡಿಸುತ್ತೇನೆ. ನಾನು ಜೆಡಿಎಸ್ ಹಾಗೂ ಶೆಟ್ಟರ್‍ಗೆ ಕೇಳ್ತೆನೆ, ನಮ್ಮ ಸಾಧನೆ ಅಲ್ಲಗೆಳೆಯುತ್ತೀರಿ ಅಲ್ಲವೇ? ನಾವು ಸಾಲ ಮನ್ನಾ ಮಾಡಿದ್ದು ಸುಳ್ಳಾ? ಅನ್ನ ಭಾಗ್ಯ ಕೊಟ್ಟಿದ್ದೇವೆ ಅದು ಸುಳ್ಳಾ? ಬ್ಯಾಕಿಗೆ ಸಬ್ಸಿಡಿ ಕೊಡುತ್ತಿದ್ದೇವೆ ಅದು ಸುಳ್ಳಾ ಎಂದು ಪ್ರಶ್ನಿಸಿ ಸಿಎಂ ವಾಗ್ದಾಳಿ ನಡೆಸಿದರು.
Advertisement
ಬೆಳಗಾವಿ ವಿಭಾಗದ ಸರ್ಕಾರ ಸಾಧನಾ ಸಮಾವೇಶವು, ಈ ಭಾಗದ ಇತಿಹಾಸದಲ್ಲೇ ಈ ರೀತಿಯಾಗಿ ಎಂದೂ ನಡೆದಿರಲಿಲ್ಲ ಎಂದು ಹೇಳಿದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ನಿಮ್ಮೆಲ್ಲರ ಸಹಕಾರವೇ ಕಾರ್ಯಕ್ರಮದ ಯಶಸ್ಸಿಗೆ ಕಾರಣ ಎಂದು ಸಿಎಂ ಹೇಳಿದರು.
Advertisement
ಇದನ್ನೂ ಓದಿ: ಚಿನ್ನದ್ದೋ, ಬ್ರಿಟಾನಿಯಾ ಬಿಸ್ಕಟ್ಟೋ ಯಾವುದರ ಬಗ್ಗೆ ನನಗೆ ಗೊತ್ತಿಲ್ಲ: ಆರ್.ವಿ.ದೇಶಪಾಂಡೆ
Advertisement
ಈ 4 ವರ್ಷದಲ್ಲಿ ಸರ್ಕಾರ ಮಾಡಿದ ಕೆಲಸದ ಪರಿಚಯವನ್ನು ಮಾಡುವ ಉದ್ದೇಶವಿದೆ. ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ಆರ್ಶೀವಾದ ಮಾಡಿ ಅಧಿಕಾರ ಕೊಟ್ಟಿದ್ದಾರೆ. ನಾವು ಚುನಾವಣೆಯಲ್ಲಿ ಕೊಟ್ಟ ಪ್ರಣಾಳಿಕೆಯ ಭರವಸೆ ಈಡೇರಿಸುವ ಜೊತೆಗೆ ಮುಟ್ಟಿಸುವ ಕೆಲಸ ನಮ್ಮದು ಎಂದು ಹೇಳಿದರು.
Advertisement
ನಾವು ಇಂದಿರಾ ಕ್ಯಾಂಟೀನ್, ಆರೋಗ್ಯ ಭಾಗ್ಯ ಯೋಜನೆ ತರುವ ಭರವಸೆ ಹೇಳಿರಲಿಲ್ಲ. ಆದರೂ ಹೆಚ್ಚಿನ ಕೆಲಸ ಮಾಡಿದ್ದೇವೆ. ಆದರೂ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ಇದೇ ಜಿಲ್ಲೆಯ ಶೆಟ್ಟರ್ ಸರ್ಕಾರ ಏನು ಕೆಲಸ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಮೂರು ಜನ ಸಿಎಂ ಕಂಡ ಸರ್ಕಾರ ಅವರದು. ಅವರಿಗೆ ಎಷ್ಟು ಭರವಸೆ ನೀಡಿಲ್ಲ ಅನಿಸುತ್ತೆ, ಅವರಿಗೆ ಇದು ಕಾಡುತ್ತಿದೆ ಎಂದು ಸಿಎಂ ಹೇಳಿದರು.
ದೇಶದ ಹಲವು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಎಲ್ಲಾದರೂ ಕೃಷಿ ಹೊಂಡ ಅನ್ನಭಾಗ್ಯ ಇದೆಯಾ? ವಿದ್ಯಾಸಿರಿಗೆ 1500 ರೂ. ಕೊಡ್ತಾ ಇದ್ದೇವೆ. ಶೂ ಭಾಗ್ಯ, ಆರೋಗ್ಯ ಭಾಗ್ಯ ನೀವ್ ಮಾಡಿದ್ದಾ? ಅನಿಲ ಭಾಗ್ಯ ಉಚಿತವಾಗಿ ಕೊಡುವ ಯೋಜನೆ ಇದೆ. ಬಿಎಸ್ ಯಡಿಯೂರಪ್ಪನವರು 2010 ರಲ್ಲಿ ಸಾಲ ಮನ್ನಾ ಮಾಡಿ ಅಂದ್ರೆ, ನೀವು ಏನ್ ಹೇಳಿದ್ರಿ ನೆನಪಿಸಿಕೊಳ್ಳಿ, ಸಾಲ ಮನ್ನಾ ಸಾಧ್ಯವಿಲ್ಲ, ನೋಟ್ ಮುದ್ರಿಸುವ ಯಂತ್ರ ಇಲ್ಲ ಅಂದ್ರಿ. ಇದು ಡೋಂಗಿತನ ಅಲ್ಲವೇ ಯಡಿಯೂರಪ್ಪನವರೆ, ಈಗಾ ವಿಧಾನಸಭೆಗೆ ಮುತ್ತಿಗೆ ಹಾಕುತ್ತೇನೆ ಎಂದು ಹೇಳುತ್ತೀರಿ. ಪ್ರಧಾನಿಗೆ ಹೇಳಿ ಸಾಲ ಮನ್ನಾ ಮಾಡಿಸಿ, ಇಲ್ಲಾಂದ್ರೆ ರೈತರ ಬಗ್ಗೆ ಮಾತನಾಡೊ ನೈತಿಕತೆ ಇಲ್ಲ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.