ಶೀಘ್ರದಲ್ಲೇ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ – ಸಿದ್ದರಾಮಯ್ಯ ಭರವಸೆ

Public TV
2 Min Read
Siddaramaiah 2 1

– 2026-27ನೇ ಸಾಲಿಗೆ 7 ರೂ. ಹಾಲಿನ ಪ್ರೋತ್ಸಾಹ ಧನ ಕೊಡ್ತೀವಿ ಎಂದ ಸಿಎಂ

ಬೆಂಗಳೂರು: ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಿದ್ದೇವೆ. ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಜನವರಿಯಿಂದ ಕೊಡಬೇಕಾಗಿದ್ದು, ಶೀಘ್ರದಲ್ಲೇ ಅದನ್ನು ಕೊಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದರು.

Sessiom

ಪರಿಷತ್‌ ಕಲಾಪದಲ್ಲಿಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಸಿಎಂ, ಶೀಘ್ರದಲ್ಲೇ ಗೃಹಲಕ್ಷ್ಮಿ ಹಣ ನೀಡಲಾಗುವುದು. ಅಲ್ಲದೇ ಪ್ರಣಾಳಿಕೆಯಲ್ಲಿ ಹೇಳಿದಂತೆ 2026-27ನೇ ಸಾಲಿಗೆ 7 ರೂಪಾಯಿ ಹಾಲಿನ ಪ್ರೋತ್ಸಾಹ ಧನ ಸಹ ಕೊಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಕ್ಕೆ 5 ಲಕ್ಷ ಪರಿಹಾರ ಯೋಜನೆ ಘೋಷಣೆ ಮಾಡಿ: ಉಮಾಶ್ರೀ

ರೈತರ ಆತ್ಮಹತ್ಯೆಗಳು 50% ಕಡಿಮೆ ಆಗಿದೆ:
ಪ್ರಸಕ್ತ ವರ್ಷದಲ್ಲಿ ಶೇ.50 ರೈತರ ಆತ್ಮಹತ್ಯೆಗಳು ಕಡಿಮೆಯಾಗಿದೆ. ಫೆಬ್ರವರಿ ಅಂತ್ಯಕ್ಕೆ 640 ಮಂದಿ ರೈತರ ಆತ್ಮಹತ್ಯೆಯಾಗಿದ್ದು, ಇದು ಬಿಜೆಪಿ ಆಡಳಿತದ ಅವಧಿಗಿಂತ ಕಡಿಮೆಯಾಗಿದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಮಾ.22ರಂದು ಅಖಂಡ ಕರ್ನಾಟಕ ಬಂದ್‌; ʻಕಾಂತಾರʼ ನಟನ ಶಿವಾಜಿ ಚಿತ್ರ ಬಂದ್ರೆ ಬಹಿಷ್ಕಾರ – ವಾಟಾಳ್‌ ನಾಗರಾಜ್‌ ಎಚ್ಚರಿಕೆ

ಮುಂದುವರಿದು.. ಪ್ರತಿ ವರ್ಷ 10 ಸಾವಿರ ಕೋಟಿ ರೂ. ನೀರಾವರಿಗೆ ಖರ್ಚು ಮಾಡೋದಾಗಿ ಕೂಡಲ ಸಂಗಮದಲ್ಲಿ ಹೇಳಿದ್ವಿ. ಅದರಂತೆ ಕಳೆದ 5 ವರ್ಷಗಳಲ್ಲಿ 56 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಈಗಲೂ 5 ವರ್ಷ 1.5 ಲಕ್ಷ ಕೋಟಿ ರೂ. ಅನುದಾನ ನೀರಾವರಿಗೆ ಕೊಡ್ತೀವಿ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಂದೇ ಹಂತದಲ್ಲಿ ಭೂಸ್ವಾಧೀನ ಮಾಡಿ ದುಡ್ಡು ಕೊಡ್ತೀವಿ ಅಂತ ಹೇಳಿದ್ದೇವೆ. ಆದ್ರೆ ಬಿಜೆಪಿಯವರು ಅಧಿಕಾರದಲ್ಲಿದ್ದ 4 ವರ್ಷ ಏನೂ ಮಾಡಿಲ್ಲ. ಕೇಂದ್ರ ಸರ್ಕಾರ ಸಹ ಈವರೆಗೆ ಘೋಷಣೆ ಮಾಡಿದ ಹಣವನ್ನೇ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ ಬಿಜೆಪಿ-ಕಾಂಗ್ರೆಸ್‌ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: KPSC ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ – ಸದನದಲ್ಲಿ ಲೋಕಸೇವಾ ಆಯೋಗ ತಿದ್ದುಪಡಿ ವಿಧೇಯಕ ಪಾಸ್

Share This Article