ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಆರೋಪ ಪ್ರತ್ಯಾರೋಪಗಳು ಹೆಚ್ಚಳವಾಗುತ್ತಿದೆ. ಇದರ ಬಿಸಿ ಸಾಮಾಜಿಕ ಜಾಲತಾಣದಲ್ಲೂ ಹೆಚ್ಚಾಗಿದ್ದು, ವಚನಗಳನ್ನು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಎರಡು ಪಕ್ಷಗಳು ಪರಸ್ಪರ ಟಾಂಗ್ ನೀಡಿವೆ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇಂದು ಮೈಸೂರು ದಲಿತ ಸಂವಾದ ಕಾರ್ಯಕ್ರಮದದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ವಿರುದ್ಧ ಅಸಮಾಧಾನವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ವಚನವನ್ನು ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
Advertisement
ಅಮಿತ್ ಶಾ ರವರೇ,
“ಕಳಬೇಡ, ಕೊಲಬೇಡ,
ಹುಸಿಯ ನುಡಿಯಲು ಬೇಡ” ಎಂದು ಬಸವಣ್ಣನವರು ಹೇಳಿದ್ದಾರೆ.
ಮೊನ್ನೆ ಯಡಿಯೂರಪ್ಪನವರ ಬಗ್ಗೆ ನಿಜ ಹೇಳಿದ್ದ ನೀವು, ಇಂದೇಕೆ ಮತ್ತೆ ಸುಳ್ಳಿನ ಹಾದಿ ಹಿಡಿದಿದ್ದೀರಾ? https://t.co/hSzMqSk4Lg
— Siddaramaiah (@siddaramaiah) March 30, 2018
Advertisement
ಅಮಿತ್ ಶಾ ರವರೇ, “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ” ಎಂದು ಬಸವಣ್ಣನವರು ಹೇಳಿದ್ದಾರೆ. ಮೊನ್ನೆ ಯಡಿಯೂರಪ್ಪನವರ ಬಗ್ಗೆ ನಿಜ ಹೇಳಿದ್ದ ನೀವು, ಇಂದೇಕೆ ಮತ್ತೆ ಸುಳ್ಳಿನ ಹಾದಿ ಹಿಡಿದಿದ್ದೀರಾ ಎಂದು ಅಮಿತ್ ಶಾ ಅವರನ್ನು ಪ್ರಶ್ನಿಸಿದ್ದಾರೆ.
Advertisement
ಹತ್ತು ಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು
ಮುಟ್ಟುವ ತೆರನನರಿಯದನ್ನಕ?
ಕಟ್ಟಿದರೇನು ಬಿಟ್ಟರೇನು
ಮನವು ಲಿಂಗದಲ್ಲಿ ಮುಟ್ಟದನ್ನಕ?
ಮಾತಿನಲೆ ಒಲಿಸಿ ಮಹತ್ತಪ್ಪ ಲಿಂಗವ ಕಂಡೆನೆಂಬ ಪಾತಕರ ಮೆಚ್ಚ ನಮ್ಮ ಕೂಡಲಸಂಗಮದೇವ! https://t.co/T3oxgLDllO
— BJP Karnataka (@BJP4Karnataka) March 30, 2018
Advertisement
ಸಿಎಂ ಸಿದ್ದರಾಮಯ್ಯ ಟ್ವೀಟ್‍ಗೆ ಮರು ಟ್ವೀಟ್ ಮಾಡಿ ಉತ್ತರ ನೀಡಿರುವ ಬಿಜೆಪಿ “ಹತ್ತು ಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು ಮುಟ್ಟುವ ತೆರನನರಿಯದನ್ನಕ? ಕಟ್ಟಿದರೇನು ಬಿಟ್ಟರೇನು ಮನವು ಲಿಂಗದಲ್ಲಿ ಮುಟ್ಟದನ್ನಕ? ಮಾತಿನಲೆ ಒಲಿಸಿ ಮಹತ್ತಪ್ಪ ಲಿಂಗವ ಕಂಡೆನೆಂಬ ಪಾತಕರ ಮೆಚ್ಚ ನಮ್ಮ ಕೂಡಲಸಂಗಮದೇವ!” ವಚನವನ್ನು ಟ್ವೀಟ್ ಮಾಡಿ ಟಾಂಗ್ ನೀಡಿದೆ.