ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಗುರುವಾರ ಸದನದಲ್ಲಿ ಹೇಳಿದಂತೆ ಇಂದು (ಜು.19) ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ 21 ಹಗರಣಗಳ ಪಟ್ಟಿಯನ್ನು ಮುಂದಿಟ್ಟು ವಿಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಈ ಮೂಲಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ (Valmiki Corporation Scam) ಬಗ್ಗೆ ಬಿಜೆಪಿ (BJP) ಆರೋಪಕ್ಕೆ ಅವರು ತಿರುಗೇಟು ನೀಡಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಈ ಹಗರಣಗಳ ಬಗ್ಗೆ ತನಿಖೆ ಏಕೆ ನಡೆದಿಲ್ಲ? ಸಿಬಿಐ, ಇಡಿ, ಐಟಿ ಏಕೆ ತನಿಖೆಗೆ ಮುಂದಾಗಿಲ್ಲ? ಎಂದು ಅವರು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕರು ಘೋಷಣೆ ಕೂಗಿದರು. ಸಿಎಂ ರಾಜೀನಾಮೆ ನೀಡಬೇಕು. ಮುಡಾ ಹಗರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಇದ್ಯಾವುದಕ್ಕೂ ಜಗ್ಗದ ಸಿಎಂ, ಬಿಜೆಪಿ ಹಗರಣಗಳ ವಿವರಗಳನ್ನು ಇಂಚಿಂಚಾಗಿ ಬಹಿರಂಗಪಡಿಸಿದರು. ಈ ಮೂಲಕ ಕೆಲವೊಂದು ಗಂಭೀರವಾದ ಪ್ರಶ್ನೆಗಳನ್ನು ಅವರು ಎತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ 21 ಹಗರಣ ನಡೆದಿದೆ – ಹಗರಣಗಳ ಪಟ್ಟಿ ಬಿಡುಗಡೆ ಮಾಡಿದ ಸಿಎಂ
Advertisement
Advertisement
ಮುಂದುವರೆದು ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೆಲೆಕ್ಟಿವ್ ಅಪ್ರೋಚ್‌ನಿಂದಾಗಿ ಹಗರಣಗಳು ಹೆಚ್ಚಾಗುತ್ತಿವೆ. ವಿಪಕ್ಷಗಳ ಮುಖಂಡರ ಮೇಲೆ ಹಗರಣಗಳ ಆರೋಪಗಳಿದ್ದರೆ, ಅವರು ಬಿಜೆಪಿ ಸೇರಿದ ಕೂಡಲೇ ಹಗರಣ ಮುಕ್ತ ಮಾಡಲಾಗುತ್ತಿದೆ. ಹೀಗಿದ್ದರೆ ಯಾವ ಕಳ್ಳರಿಗೆ ತಾನೆ ಭಯ ಹುಟ್ಟಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನೂ ಬ್ಯಾಂಕ್‍ನಲ್ಲಿ ಹಗರಣಗಳು ಆಗಿದ್ದೆ ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್‍ನ ಸಾವಿರಾರು ಕೋಟಿ ರೂ. ಹಗರಣ ಏನಾಯ್ತು? ಹಗರಣ ಮಾಡಿದವರು ಲೋಕಸಭೆಗೂ ಹೋಗಿದ್ದಾರೆ ಇದರ ಬಗ್ಗೆ ಯಾಕೆ ಸಿಬಿಐ ತನಿಖೆ ಮಾಡುತ್ತಿಲ್ಲ? ವಿರೋಧ ಪಕ್ಷಗಳು ಹೆದರಿ ಬಿಜೆಪಿಗೆ ಸೇರಿಬಿಡಬೇಕು. ಆಗ ಅವರ ಮೇಲಿನ ಕೇಸ್‍ಗಳನ್ನು ಮುಚ್ಚಿ ಹಾಕೋದು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಇವರ ಹಗರಣಗಳನ್ನು ಬಿಚ್ಚಿಡುತ್ತಾರೆ ಎಂಬ ಭಯ ಇವರಿಗೆ. ಬೊಮ್ಮಾಯಿ, ಯಡಿಯೂರಪ್ಪ ಕಾಲದಲ್ಲಿ ಹಗರಣಗಳು ನಡೆದಿರೋದು. ಭ್ರಷ್ಟಾಚಾರ ಪಿತಾಮಹರೇ ಬಿಜೆಪಿಯವರು. ನಮ್ಮ ಹಗರಣಗಳು ಬಿಚ್ಚಬಾರದು ಎಂದು ಇಲ್ಲಿ ಗಲಾಟೆ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲೇ ಇಷ್ಟು ಕೆಟ್ಟದಾಗಿ ಪ್ರತಿಪಕ್ಷಗಳು ನಡೆದುಕೊಂಡಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ತಾಕತ್ ಇದೆಯಾ ತಾಕತ್ ಇದೆಯಾ ಎನ್ನುತ್ತಿದ್ದ ಇವರ ಸ್ಥಿತಿ ಏನಾಯ್ತು? ಚುನಾವಣೆಯಲ್ಲಿ 64 ಸೀಟ್‍ಗೆ ಇಳಿದರು ಎಂದು ತೋಳು ತಟ್ಟಿ ತೋರಿಸಿದರು. ಮತದಾರರು ಇವರನ್ನು ಕಳ್ಳರು, ಲೂಟಿಕೋರರು ಎಂದು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ನಾವು ಯಾರೇ ತಪ್ಪಿತಸ್ಥರಿದ್ದರೂ ಯಾರಿಗೂ ರಕ್ಷಣೆ ಕೊಡಲ್ಲ ಎಂದು ಅವರು ಬಿಜೆಪಿಗೆ ಟಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಇಂದಿನ ಸದನ ಒಂದು ಕಪ್ಪು ಚುಕ್ಕೆ – ಸದನ ನಡೆಸಲು ಸ್ಪೀಕರ್ ವಿಫಲ: ಆರ್.ಅಶೋಕ್