ಕಲಬುರಗಿ: ಉತ್ತಮ ಬಜೆಟ್‍ಗಾಗಿ ಸಚಿವ ರಾಯರೆಡ್ಡಿ ಮತ್ತು ಗುಲಬರ್ಗಾ ವಿವಿ ಉಡುಗೊರೆಯಾಗಿ ನೀಡಿದ ಬೆಳ್ಳಿ ಹಸುವಿನ ಮೂರ್ತಿಯನ್ನು ಸಿಎಂ ನಿರಾಕರಿಸಿದ್ದಾರೆ.
ಇಂದು ನಗರದ ವಿಶ್ವವಿದ್ಯಾಲಯದ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಉತ್ತಮ ಬಜೆಟ್‍ಗಾಗಿ ರೆಡ್ಡಿ ಸಮಾಜದ ವತಿಯಿಂದ ಸಿದ್ದರಾಮಯ್ಯ ಅವರಿಗೆ ಚಿನ್ನದ ಪದಕ ನೀಡಲಾಯಿತು. ಇದೇ ಸಂದರ್ಭದಲ್ಲಿ ವಿವಿ ವತಿಯಿಂದ ಬೆಳ್ಳಿ ಆಕಳು ಮೂರ್ತಿಯನ್ನು ಸಿದ್ದರಾಮಯ್ಯರಿಗೆ ನೀಡಿ ಗೌರವಿಸಲಾಯಿತ್ತು.
Advertisement
Advertisement
ನಂತರ ಭಾಷಣದಲ್ಲಿ ಮಾತನಾಡಿದ ಸಿಎಂ, ಗಿಫ್ಟ್ ಗಳು ವಿವಾದಕ್ಕೆ ಕಾರಣವಾಗುತ್ತಿವೆ. ಈ ಹಿಂದೆ ಸ್ನೇಹಿತ ನೀಡಿದ ವಾಚ್ ಪ್ರಕರಣದಿಂದ ದೊಡ್ಡ ಅಪಪ್ರಚಾರವಾಯಿತು. ಹೀಗಾಗಿ ಇಲ್ಲಿ ನೀಡಿರುವ ಪದಕ ಮತ್ತು ಬೆಳ್ಳಿ ಮೂರ್ತಿಯನ್ನು ವಿವಿಗೇ ನೀಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಗಿಫ್ಟ್ ಗಳನ್ನು ಸ್ವೀಕರಿಸುವದಿಲ್ಲ ಅಂತಾ ಹೇಳಿದ್ರು.
Advertisement
Advertisement
ಇದೇ ವೇಳೆ ಗೋವಿಂದರಾಜು ಡೈರಿ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಸಹಾರಾ ಪ್ರಕರಣವನ್ನು ಸಿಬಿಐಗೆ ನೀಡಿದ್ರೆ ನಮ್ಮ ಡೈರಿ ಪ್ರಕರಣವನ್ನು ಸಿಬಿಐಗೆ ನೀಡಲಾಗುವುದು. ಅದೊಂದು ನಕಲಿ ಡೈರಿ ಇಟ್ಟಿಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‍ನವರಿಗೆ ಜೈಲಿಗೆ ಕಳುಹಿಸುವ ಕುರಿತು ಯಡಿಯೂರಪ್ಪಗೆ ಬುದ್ಧಿ ಭ್ರಮಣೆಯಾಗಿದೆ. ಜೈಲಿಗೆ ಹೋಗಿ ಬಂದವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ತಿರುಗೇಟು ನೀಡಿದರು.