ಹುಬ್ಬಳ್ಳಿ: ಮೋದಿಯವರು ನಮಗೆ 2+1, 1+1 ಸೂತ್ರ ಅನ್ನುತ್ತಾರೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿರಲಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯನವರು ಪ್ರಶ್ನೆ ಮಾಡಿದ್ದಾರೆ.
ಗೋವಿಂದ ಕಾರಜೋಳ ಅವರ ಮಗ, ಉದಾಸಿಯವರ ಮಗ, ಶಶಿಕಲಾ ಜೊಲ್ಲೆ ಅವರ ಗಂಡ, ಉಮೇಶ್ ಕತ್ತಿ ಅವರ ತಮ್ಮ, ಯಡಿಯೂರಪ್ಪ ಅವರ ಮಗ ರಾಘವೇಂದ್ರ ಇವರೆಲ್ಲ ಚುನಾವಣೆಗೆ ಸ್ಪರ್ಧಿಸಿಲ್ಲವೇ ಎಂದು ಪ್ರಶ್ನಿಸಿದರು.
ಚಾಮುಂಡೇಶ್ವರಿಯಲ್ಲಿ ಎಷ್ಟೇ ಒಳ ಒಪ್ಪಂದ ಮಾಡಿದರೂ ನನ್ನನ್ನು ಸೋಲಿಸಲಿಕ್ಕೆ ಆಗಲ್ಲ. ಯಡಿಯೂರಪ್ಪಗೆ ಸಾಮಾನ್ಯ ಕಾನೂನಿನ ಜ್ಞಾನವೂ ಇಲ್ಲ. ನನ್ನನ್ನು ಜೈಲಿಗೆ ಕಳಿಸುತ್ತೇನೆ ಎನ್ನುತ್ತಿದ್ದಾರೆ. ನನ್ನ ವಿರುದ್ಧ ಯಾವ ಕ್ರಿಮಿನಲ್ ಚಾರ್ಜ್ ಇಲ್ಲ ಎಂದು ತಿರುಗೇಟು ನೀಡಿದರು.
ಯಡಿಯೂರಪ್ಪ ಅಧಿಕಾರಕ್ಕೆ ಬರಲ್ಲ, ಮುಖ್ಯಮಂತ್ರಿ ಆಗಲ್ಲ. ಯಡಿಯೂರಪ್ಪಗೆ ಸೋಲಿನ ಭಯ ಶುರುವಾಗಿದೆ, ಮತ್ತೆ ಜೈಲಿಗೆ ಹೋಗುತ್ತೇನೆ ಎಂದು ಹೆದರಿಕೆ ಆರಂಭವಾಗಿದೆ. ಹೀಗಾಗಿ ನಾನೇ ಸಿಎಂ ಆಗುತ್ತೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಜನ ಲೂಟಿಕೋರರಿಗೆ ಅಧಿಕಾರ ಕೊಡಲ್ಲ. ನಾನು ಪಾದಯಾತ್ರೆ ಮಾಡಿದ್ದು ರೆಡ್ಡಿ ಬ್ರದರ್ಸ್ ವಿರುದ್ಧ. ಆನಂದ ಸಿಂಗ್ ಜೈಲಿಗೆ ಹೋಗಿದ್ದರು. ಆದರೆ ಅವರ ಆರೋಪ ಸಾಬೀತಾಗಿಲ್ಲ. ಯಡಿಯೂರಪ್ಪ ಸೇರಿದಂತೆ ಏಳು ಜನರ ವಿರುದ್ಧ ಆರೋಪ ಸಾಬೀತಾಗಲಿದೆ. ಆನಂದ ಸಿಂಗ್, ಸತೀಶ ಶೈಲ್‍ಗೆ ಶಿಕ್ಷೆ ಆಗಲ್ಲ ಎಂದು ಹೇಳಿದರು.