ರಾಮನಗರ: ದ್ವೇಷದ ರಾಜಕಾರಣ ಮಾಡೋದ್ರಲ್ಲಿ ದೇವೇಗೌಡರು ನಂಬರ್ 1. ಉಸಿರಿರುವ ವರೆಗೆ ಮೇಕೆದಾಟು ಮಾಡ್ತೇನೆ ಅಂದಿದ್ದಾರೆ, ಮಿಸ್ಟರ್ ದೇವೇಗೌಡ, ನಿಮ್ಮನ್ನ ಸಿಎಂ ಮಾಡಿದ್ದು ಯಾರು? ಮೇಕೆದಾಟು ಮಾಡಿಸಲು ಮೋದಿಯನ್ನ ಹಾಡಿ ಹೊಗಳ್ತೀರಿ. ಇದೇ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಬಗ್ಗೆ ಏನು ಹೇಳಿದ್ರು? ಕುಮಾರಸ್ವಾಮಿ ಮೋದಿಯಂತಹ ಸುಳ್ಳುಗಾರ ಇಲ್ಲ ಅಂತ ಹೇಳಿದ್ದರು. ದೇವೇಗೌಡರು ಮೋದಿ ಯಾವುದೇ ಕಾರಣಕ್ಕೂ ಪ್ರಧಾನಿ ಆಗಲ್ಲ, ಒಂದು ವೇಳೆ ಪ್ರಧಾನಿ ಆದ್ರೆ ದೇಶ ಬಿಡ್ತಿನಿ ಅಂದರು, ಬಿಟ್ರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಇವತ್ತು ಪ್ರಚಾರದ ಕೊನೆಯ ದಿನದ ಭಾಗವಾಗಿ ಚನ್ನಪಟ್ಟಣದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಇಷ್ಟು ಸಂಖ್ಯೆಯಲ್ಲಿ ಜನ ಸೇರಿರೋದು ನೋಡಿದ್ರೆ ಯೋಗೆಶ್ವರ್ ಗೆಲ್ಲುವ ವಿಶ್ವಾಸ ಬಂದಿದೆ. ಸೂರ್ಯ, ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಯೋಗೆಶ್ವರ್ ಗೆಲುವು ಕೂಡಾ ಅಷ್ಟೇ ಸತ್ಯ. ಈ ಕ್ಷೇತ್ರದ ಜನರಿಗೆ ಅರ್ಥ ಆಗಿದೆ. ಯಾರು ಜನರ ಜೊತೆ ಇರ್ತಾರೆ? ಯಾರು ಅಭಿವೃದ್ಧಿ ಮಾಡ್ತಾರೆ ಅಂತ ಗೊತ್ತಿದೆ. ಯೋಗೇಶ್ವರ್ 5 ಬಾರಿ ಶಾಸಕರಾಗಿದ್ದವರು. ಅವರು ಶಾಸಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರನ್ನ ಆಧುನಿಕ ಭಗೀರಥ ಅಂತ ಕರೀತಾರೆ. ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ಸಹಾಯ ಮಾಡಿದ್ದಾರೆ. ನಾನು 6ನೇ ತಾರೀಖು ಬಂದಾಗ ಎಲ್ಲಾ ಕಡೆ ಹಸಿರು, ಹೈನುಗಾರಿಕೆ ಆಗ್ತಿದೆ. ಅದಕ್ಕೆ ಯೋಗೆಶ್ವರ್ ಹೇಳಿದ್ರು ಕೆರೆಗಳಿಗೆ ನೀರು ತುಂಬಿಸಿದ್ದೇನೆ ಅಂದ್ರು. ಹಾಗಾಗಿ ಈ ಕ್ಷೇತ್ರ ಎಲ್ಲಾ ಕಡೆ ಹಸಿರಾಗಿ ಕಾಣುತ್ತೆ ಎಂದು ಯೋಗೇಶ್ವರ್ ಪರ ಬ್ಯಾಟ್ ಬೀಸಿದರು.
Advertisement
Advertisement
ಪ್ರತಿ ಮನೆಯಲ್ಲೂ ಹಸುಗಳ ಸಾಕಿ, ದಿನಕ್ಕೆ 3 ಲಕ್ಷ ಲೀ. ಹಾಲು ಉತ್ಪಾದನೆ ಆಗ್ತಿದೆ. ಅದಕ್ಕೆ ಹಾಲಿನ ದರ ಏರಿಕೆಗೆ ಮನವಿ ಮಾಡಿದ್ರು. ಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ಕರ್ನಾಟಕದಲ್ಲಿ ರೈತರಿಗೆ ಹಾಲಿನ ದರ ಕಡಿಮೆ ಇದೆ. ಹಾಗಾಗಿ ಸಹಾಯ ಧನ ಹೆಚ್ಚು ಮಾಡಿ ಅಂತ ಮನವಿ ಮಾಡಿದ್ರು. ರೈತರ ಹಾಲಿನ ದರ, ಮಾರಟದ ದರದ ಹೆಚ್ಚಳದ ಬಗ್ಗೆ ಮನವಿ ಮಾಡಿದ್ದಾರೆ. ಚುನಾವಣೆ ಬಳಿಕ ರೈತರ ಪರವಾದ ತೀರ್ಮಾನ ಮಾಡ್ತೀನಿ ಎಂದು ಸಿಎಂ ಭರವಸೆ ನೀಡಿದರು.
Advertisement
ಯೋಗೇಶ್ವರ್ ಸಾಮಾನ್ಯ ಕುಟುಂಬದಿಂದ ಬಂದ ಅಭ್ಯರ್ಥಿ. ಇವರ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ. ಪಾಪ ಈಗಾಗಲೇ ಎರಡು ಕಡೆ ಸೋತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಮಂಡ್ಯದಲ್ಲಿ ಸೋತರು. ರಾಮನಗರದಲ್ಲೂ ಸೋತರು, ಕುಮಾರಸ್ವಾಮಿ ಅವರ ಬಾವನ ಗೆಲುವಿಗೆ ಯೋಗೆಶ್ವರ್ ಕೆಲಸ ಮಾಡಿದ್ರು. ಆಗ ಯೋಗೆಶ್ವರ್‌ಗೆ ಟಿಕೆಟ್ ಕೊಡುವ ಮಾತು ಕೊಟ್ಟು ಅನ್ಯಾಯ ಮಾಡಿದ್ರು. ಯಾರಿಗೆ ಟಿಕೆಟ್ ಕೊಡಬೇಕಿತ್ತು, ನಿಖಿಲ್‌ಗೆ ಟಿಕೆಟ್ ಕೊಡಬೇಕಿತ್ತಾ? ಪುತ್ರ ವ್ಯಾಮೋಹದಿಂದ ನಿಖಿಲ್‌ಗೆ ಟಿಕೆಟ್ ಕೊಟ್ರು ಎಂದು ತಿವಿದರು.
ದೇವೇಗೌಡರು ಇದಾರಲ್ಲ, ನಾನು ಅವರ ಜೊತೆ ಇದ್ದವನು. ಅವರು ಯಾವ ಒಕ್ಕಲಿಗ ಲೀಡರ್ ಗಳನ್ನೂ ಬೆಳೆಸಲಿಲ್ಲ. ಯಾರು ಯಾರು ಒಕ್ಕಲಿಗ ಪ್ರಬುದ್ಧ ಲೀಡರ್ ಗಳಿರ್ತಾರೆ ಅವರನ್ನ ಬೆಳಿಸಿಲ್ಲ. ಸಾಕಷ್ಟು ನಾಯಕರ ಪಟ್ಟಿ ಓದಿ ದೇವೇಗೌಡರಿಗೆ ಕೌಂಟರ್ ಕೊಟ್ಟರು. ನಾನು ಹಿಂದುಳಿದ ವರ್ಗದ ನಾಯಕ ನನ್ನನ್ನ ಬಿಟ್ಟುಬಿಡಿ. ಯಾರನ್ನಾದರೂ ಒಬ್ಬ ಒಕ್ಕಲಿಗ ನಾಯಕನನ್ನ ಬೆಳೆಸಿದ್ದಾರಾ? ತೋರಿಸಲಿ. ಯಾವ ಒಕ್ಕಲಿಗ ನಾಯಕರನ್ನ ಬೆಳೆಸಿದ್ದೀರಿ ಹೇಳಿ? ಅವರು ಹೇಳಿದಂತೆ ನಡೆದುಕೊಳ್ಳಲಿಲ್ಲ ಅಂದ್ರೆ ಮುಗಿಸ್ತಾರೆ. ಈಗ ಜಿ.ಟಿ.ದೇವೇಗೌಡರಿಗೂ ಕಾಟ ಕೊಡ್ತವ್ರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇಂತವ್ರು ಈ ಯೋಗೆಶ್ವರ್, ಡಿಕೆಶಿ, ಡಿಕೆಸು ಬೆಳೆಸ್ತಾರಾ? ದಯಮಾಡಿ ಈ ಜಾತಿ ವ್ಯಾಮೋಹ ಬಿಟ್ಟು ಮತ ನೀಡಿ. ಅವರು ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ದ್ವೇಷದ ರಾಜಕಾರಣ ಮಾಡೋದ್ರಲ್ಲಿ ದೇವೇಗೌಡರು ನಂಬರ್ 1. ಉಸಿರಿರುವ ವರೆಗೆ ಮೇಕೆದಾಟು ಮಾಡ್ತೇನೆ ಅಂದವ್ರೆ. ಮಿಸ್ಟರ್ ದೇವೇಗೌಡ, ಮೇಕೆದಾಟು ಮಾಡಿಸಲು ಮೋದಿಯನ್ನ ಹಾಡಿ ಹೊಗಳ್ತೀರಿ. ಇದೇ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಬಗ್ಗೆ ಏನು ಹೇಳಿದ್ರು? ಕುಮಾರಸ್ವಾಮಿ ಮೋದಿಯಂತಹ ಸುಳ್ಳುಗಾರ ಇಲ್ಲ ಅಂತ ಹೇಳಿದ್ದರು. ದೇವೇಗೌಡರು ಮೋದಿ ಯಾವುದೇ ಕಾರಣಕ್ಕೂ ಪ್ರಧಾನಿ ಆಗಲ್ಲ, ಒಂದು ವೇಳೆ ಪ್ರಧಾನಿ ಆದ್ರೆ ದೇಶ ಬಿಡ್ತಿನಿ ಅಂದರು, ಬಿಟ್ರಾ? ಎಂದು ಕುಟುಕಿದರು.
ಇದು ಪಾಳೆಗಾರಿಕೆ ಪ್ರವೃತ್ತಿ ಅಲ್ವಾ? ನಿಮಗೆ ದಲಿತರು, ಹಿಂದುಳಿದವರ್ಗದವರು, ಮಹಿಳೆಯರ ಕಂಡರೆ ಆಗಲ್ಲ. ನಿಮ್ಮ ಮಗ ಸಿಎಂ ಆಗಿದ್ರು ಕ್ಷೇತ್ರಕ್ಕೆ ಏನುಮಾಡಿಲ್ಲ. ಬಂ ದು ಅಳ್ತಾರೆ, ವಂಶದ ಪರಂಪರೆ ಅಂತಾರೆ. ಪಾಪ ನಿಖಿಲ್ ಕೂಡಾ ಅಳೋದನ್ನ ಕಲಿತಿದ್ದಾರೆ. ಇಲ್ಲಿಬಂದು ಅಳುವುದನ್ನ ಬಿಟ್ಟು ಹಾಸನದಲ್ಲಿ ಅಳಬೇಕು. ಅಲ್ಲಿ ಹೆಣ್ಣುಮಕ್ಕಳು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅಲ್ಲಿ ಹೋಗಿ ದೇವೇಗೌಡರು ಕಣ್ಣೀರು ಹಾಕಿ. ಮೊಮ್ಮಗ ಗೆಲ್ಲಿಸಲು ವಾರದಿಂದ ಇಲ್ಲೇ ಇದ್ದೀರಿ. ಆದೇ ಯೋಗೆಶ್ವರ್ ಅವರ ಅಭ್ಯರ್ಥಿ ಆಗಿದ್ರೆ ಬಂದು ಪ್ರಚಾರ ಮಾಡ್ತಿದ್ರಾ.? ಅವರು ಬರ್ತಿರೋದು ಮೊಮ್ಮಗನ ಗೆಲ್ಲಿಸಲು. ಇದನ್ನ ತಿಳಿದುಕೊಂಡು ಜನ ವೋಟ್ ಕೊಡಬೇಕು. ಕಣ್ಣೀರಿಗೆ ಮರುಳಾಗಬಾರದು ಎಂದು ಸಿಎಂ ಹೇಳಿದರು.
ಗ್ಯಾರಂಟಿ ನಿಲ್ಲಲ್ಲ, ನಿಲ್ಲಲ್ಲ:
ನಾವು ಯಾವತ್ತೂ ಜಾತಿ ಮೇಲೆ ರಾಜಕೀಯ ಮಾಡಲ್ಲ. ಜಾತಿ ಮೇಲೆ ಕೆಲಸ ಮಾಡಿಲ್ಲ. ಇದನ್ನ ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು. ನಾವು ಕೊಟ್ಟ ಭರವಸೆಗಳನ್ನ ಈಡೇರಿಸಿದ್ದೇವೆ. ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಸೇರಿ ಸಾಕಷ್ಟು ಯೋಜನೆ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಎರಡನೆ ಬಾರಿ ಸಿಎಂ ಆಗಿದ್ದಕ್ಕೆ ದೇವೇಗೌಡರಿಗೆ ಹೊಟ್ಟೆಉರಿ. ಕುಮಾರಸ್ವಾಮಿ ಐದು ವರ್ಷ ಪೂರೈಸಲಿಲ್ಲ ಅಂತ ಹೊಟ್ಟೆಹುರಿ. ಈ ಹೊಟ್ಟೆಹುರಿ ದೇವೇಗೌಡರನ್ನೇ ದಹಿಸುತ್ತೆ ವರತೂ ನನ್ನನ್ನ ಏನು ಮಾಡಲು ಆಗಲ್ಲ. ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ ಕೊಟ್ಟಿದ್ದೇವೆ. ಮೋದಿ ಇದಕ್ಕೆಲ್ಲ ಹಣ ಎಲ್ಲಿಂದ ಹಣ ತರ್ತಾರೆ ಅಂದ್ರು. ಇದು ಜಾರಿ ಆದ್ರೆ ಕರ್ನಾಟಕ ದಿವಾಳಿ ಆಗುತ್ತೆ ಅಂದ್ರು. ನಾನು ಡಿಕೆಶಿ ಪ್ರಮಾಣ ವಚನ ಸ್ವೀಕರಿಸಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ನಾವು ಸಾಕ್ಷಿ ಗುಡ್ಡೆ ಬಿಟ್ಟು ಹೋಗಿಲ್ವಾ.? ಶಕ್ತಿಯೋಜನೆಯಲ್ಲಿ 324 ಕೋಟಿ ಮಹಿಳೆಯರು ಓಡಾಡಿದ್ದಾರೆ. ಈ ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ ಎಂದು ಗುಡುಗಿದರು.