ಮೈಸೂರು: ಪಬ್ಲಿಕ್ ಟಿವಿ (PUBLiC TV) ಸಿನಿಮಾ ವಿಭಾಗದ ಮುಖ್ಯಸ್ಥ ಡಾ. ಶರಣು ಹುಲ್ಲೂರು (Dr.Sharanu Hullur) ಅವರಿಗೆ ಸಿಎಂ ಸಿದ್ದರಾಮಯ್ಯನವರು (CM Siddaramaiah) ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ರಾಜ್ಯ ಸರ್ಕಾರ ಪ್ರಕಟಿಸಿದ 2018 ಹಾಗೂ 2019ರ ಚಲನಚಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಂದು ಹುಣಸೂರು ರಸ್ತೆಯ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ನಡೆಯಿತು. ಈ ವೇಳೆ ಅಂಬರೀಶ್ ಅವರ ವ್ಯಕ್ತಿತ್ವ ಕುರಿತ ʼಅಂಬರೀಶ್ʼಸಾಹಿತ್ಯ ಪುಸ್ತಕವನ್ನು ಬರೆದ ಶರಣು ಹುಲ್ಲೂರು ಅವರಿಗೆ ಪದಕ, ಪ್ರಶಸ್ತಿಯನ್ನು ನೀಡಿ ಸಿಎಂ ಪುರಸ್ಕರಿಸಿದರು. ಈ ಪುಸ್ತಕವನ್ನು ಸಾವಣ್ಣ ಪ್ರಕಾಶನ ಪ್ರಕಟಿಸಿದ್ದು ಮಾಲೀಕರಾದ ಜಮೀಲ್ ಸಾವಣ್ಣ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಂಬರೀಶ್ (Ambaressh) ಅವರ ವ್ಯಕ್ತಿ- ವ್ಯಕ್ತಿತ್ವ ಹಾಗೂ ವರ್ಣರಂಜಿತ ಬದುಕನ್ನು ತೆರೆದಿಡುವ ಕೃತಿಯನ್ನು ಡಾ. ಶರಣು ಹುಲ್ಲೂರು ರಚಿಸಿದ್ದಾರೆ. ಇದು ಅಂಬರೀಶ್ ಅವರು ಹುಟ್ಟಿದ ವಿಸ್ಮಯ ಗಳಿಗೆಯಿಂದ ಅಂತ್ಯದವರೆಗಿನ ಪ್ರಮುಖ ಅಂಶಗಳನ್ನು ಸ್ವಾರಸ್ಯಕರವಾಗಿ ಚಿತ್ರಿಸುತ್ತದೆ. ಆ ಕಾರಣ ಅವರ ವಿಶಿಷ್ಟ ಜೀವನಚರಿತ್ರೆಯಾಗಿ ಕೃತಿ ಮೈದಳೆದಿದೆ. ಇದನ್ನೂ ಓದಿ: ನಮ್ಮ ಮೇಲಿರುವ ಆರೋಪಗಳು ಸುಳ್ಳು ಎಂದ ಡಿ ಗ್ಯಾಂಗ್ – ಕೋರ್ಟ್‌ನಲ್ಲಿ ಇಂದು ಏನಾಯ್ತು?

