-ಕುತೂಹಲ ಮೂಡಿಸಿದ ಬುಧವಾರದ ರಾಜ್ಯ ಬಜೆಟ್
ಬೆಂಗಳೂರು: ಇನ್ನೆರಡು ದಿನ ಕಳೆದರೆ ಸಿದ್ದರಾಮಯ್ಯನವರ ಲೆಕ್ಕ ಅಂದ್ರೆ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಈ ಬಾರಿಯ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಪ್ರಮುಖ ವಿಷಯವಾಗಿದೆ. ಈಗಾಗ್ಲೇ ಹೆಚ್ಚು ಹಣ ಮೀಸಲಿಡುವಂತೆ ಸ್ವತಃ ಹೈಕಮಾಂಡ್ ಕೂಡ ಸಿಎಂಗೆ ಒತ್ತಾಯಿಸಿದೆ. ಜೊತೆಗೆ ಚುನಾವಣಾ ದೃಷ್ಟಿಯಿಂದಲೂ ರೈತರ ಸಾಲ ಮನ್ನಾ ಮಾಡುವ ಸಾಧ್ಯತೆಯಿದೆ.
ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಆರ್ಭಟ ಜೋರಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಟೇಕ್ ಆಫ್ ಆಗಿಲ್ಲ ಅಂತಿದ್ದು, ಬಜೆಟ್‍ನಲ್ಲಿ ಜನಪರ ಘೋಷಣೆ ನೀಡಬೇಕು. ಆ ಮೂಲಕ ಜನರಿಗೆ ಅಚ್ಚರಿ ನೀಡಿ ಕಾಂಗ್ರೆಸ್‍ನತ್ತ ಜನರನ್ನ ಸೆಳೆಯಬೇಕು. ಇದಕ್ಕಾಗಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಅನ್ನೋ ಒತ್ತಾಯ ಕೇಳಿಬಂದಿದೆ.
Advertisement
11 ಸಾವಿರ ಕೋಟಿ ರೈತರ ಸಾಲ ಮನ್ನಾಗೆ ರಾಜ್ಯ ಸರ್ಕಾರ ನಿರ್ಧಾರ ಮಾಡುವ ಸಾಧ್ಯತೆಯಿದೆ. ಇದ್ರಿಂದ ಸಂಕಷ್ಟದಲ್ಲಿರುವ 14 ಲಕ್ಷದ 72 ಸಾವಿರ ರೈತರಿಗೆ ಸಹಾಯವಾಗಲಿದೆ. ಕೇಂದ್ರ ಸರ್ಕಾರದಿಂದಲೂ ರೈತರ ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸಲು ನಿರ್ಧಾರವಾಗಿದೆ.
Advertisement
ರೈತರ ಸಾಲ ಮನ್ನಾ ಬಗ್ಗೆ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ರಾಜಕೀಯ ತಂತ್ರಗಾರಿಕೆ ನಡೀತಿದೆ. ಈಗ ರೈತರ ಸಾಲ ಮನ್ನಾ ಮಾಡಿ ಕೇಂದ್ರ ಬಿಜೆಪಿ ಸರ್ಕಾರದ ಮೇಲೂ ಒತ್ತಡ ತರಲು ಕಾಂಗ್ರೆಸ್ ರಣತಂತ್ರ ಹೆಣದಿದೆ.
Advertisement
* ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕ್‍ಗಳಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಿದೆ.
* ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾಗೆ ಬಿಜೆಪಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ.
* ರೈತರ ಸಾಲ ಮನ್ನಾ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದೇ ಬಿಜೆಪಿ.
* ಸದನದಲ್ಲಿ ಶೆಟ್ಟರ್ – ಸಿಎಂ ಮಧ್ಯೆ ಸವಾಲ್ ನಡೆದಿತ್ತು.
* ಕೇಂದ್ರದಿಂದ ಅರ್ಧ ಸಾಲ ಮನ್ನಾ ಮಾಡಿಸಿ, ರಾಜ್ಯ ಅರ್ಧ ಭರಿಸಲಿದೆ ಅಂತಾ ಸಿಎಂ ತಿರುಗೇಟು ನೀಡಿದ್ರು.
* ಮೊದಲು ನೀವು ಘೋಷಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ. ಕೇಂದ್ರದಿಂದ ಶೇ 50 ರಷ್ಟು ಸಾಲ ಮನ್ನಾ ಮಾಡಿಸುವ ಹೊಣೆ ನಮ್ಮದು ಅಂದಿದ್ರು ಶೆಟ್ಟರ್.
* ವಾರದ ಹಿಂದಷ್ಟೇ ಪ್ರಧಾನಿ ಮೋದಿ ಅವರಿಗೆ ಸಿದ್ದರಾಮಯ್ಯ ಪತ್ರ ಕೂಡ ಬರೆದಿದ್ರು.
* ಶೇ. 50 ರಷ್ಟು ಸಾಲ ಮನ್ನಾ ಮಾಡಿದ್ರೆ ರಾಜ್ಯ ಸರ್ಕಾರ ಉಳಿದ ಹಣ ಭರಿಸುತ್ತೆ ಅಂತ ಪತ್ರದಲ್ಲಿ ಬರೆದಿದ್ರು.
* ಬಜೆಟ್‍ಗೂ ಮುನ್ನ ಪತ್ರ ಬರೆದಿರುವ ಸಿಎಂ, ರಾಜಕೀಯ ತಂತ್ರಗಾರಿಕೆ ತಂದ ಕುತೂಹಲ.
Advertisement
ಇದೇ 15 ರಂದು ಸಿದ್ದರಾಮಯ್ಯ ಮಹತ್ವದ ಬಜೆಟ್ ಮಂಡಿಸಲಿದ್ದಾರೆ. ನಿರೀಕ್ಷೆಯಂತೆ 11 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ಬಿಜೆಪಿ ಮೇಲೆ ಬೊಟ್ಟು ಮಾಡಲು ಪ್ಲಾನ್ ಹಾಕಿದ್ದಾರೆ.