ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು, ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣಾ ಅವರ ಅಂತಿಮ ದರ್ಶನ ಪಡೆದರು. ಬೆಂಗಳೂರಿನ ಸದಾಶಿವ ನಗರದ ಎಸ್‌ಎಂ ಕೃಷ್ಣ (SM Krishna) ಅವರ ನಿವಾಸಕ್ಕೆ ಆಗಮಿಸಿ, ಅಂತಿಮ ನಮನ ಸಲ್ಲಿಸಿದರು.
ಮುಖ್ಯಮಂತ್ರಿ @siddaramaiah ಅವರು ಇಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ. ಕೃಷ್ಣರವರ ಪ್ರಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. pic.twitter.com/bcKb5ikvNd
— CM of Karnataka (@CMofKarnataka) December 10, 2024
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಎಂಕೆ ಅವರು ಕರ್ನಾಟಕ ಹಾಗೂ ದೇಶದ ರಾಜಕಾರಣದಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರು. ಆರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದರು. ವಿಧಾನಸಭೆ, ಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದರು. ಐದು ವರ್ಷಗಳ ಕಾಲ ರಾಜ್ಯದ ಸಿಎಂ ಆಗಿದ್ದರು. ಬೆಂಗಳೂರನ್ನು ಸಿಂಗಾಪುರ ಮಾಡಬೇಕೆನ್ನುವ ಕನಸನ್ನು ಕಂಡಿದ್ದರು. ಐಟಿ ಬೆಳವಣಿಗೆ ಅಪಾರವಾದ ಕೊಡಗೆ ಕೊಟ್ಟಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದುಕೊಂಡಿರುವುದರಲ್ಲಿ ಎಸ್‌ಎಂಕೆ ಪಾತ್ರ ದೊಡ್ಡದಿದೆ ಎಂದು ಸ್ಮರಿಸಿದರು.ಇದನ್ನೂ ಓದಿ: ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತಂದವರು ಎಸ್‌ಎಂಕೆ: ಅಭಿಷೇಕ್ ಅಂಬರೀಶ್
Advertisement
Advertisement
ಸಿಎಂ ಆಗಿದ್ದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಬರಗಾಲ, ಡಾ.ರಾಜ್ ಕುಮಾರ್ ಕಿಡ್ನಾಪ್, ಕಾವೇರಿ ವಿವಾದ ಹೀಗೆ ಹಲವು ಸಮಸ್ಯೆಗಳನ್ನು ಜಾಣ್ಮೆಯಿಂದ ನಿರ್ವಹಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
Advertisement
Saddened by the demise of former Chief Minister Shri S.M. Krishna. His unparalleled contributions as a Union Minister, Chief Minister, and leader have left an indelible mark. Karnataka will forever remain indebted to him, especially for his visionary leadership in transforming… pic.twitter.com/r2N3tt9ngA
— Siddaramaiah (@siddaramaiah) December 10, 2024
ನಾನು ಕಾಂಗ್ರೆಸ್ ಸೇರುವ ಮೊದಲು ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ವಿಚಾರ ತಿಳಿಸಿದ್ದೆನು. ನೀವು ಕಾಂಗ್ರೆಸ್ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದರು. ಸಜ್ಜನ ರಾಜಕಾರಣ, ಎಸ್‌ಎಂಕೆಯಂತಹ ಒಳ್ಳೆಯ ವಾಗ್ಮಿಯನ್ನು ಕಳೆದುಕೊಂಡಿದ್ದು ರಾಜಕೀಯ ಕ್ಷೇತ್ರಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಸಾವಿನ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಪಾರ್ಥಿಸಿಕೊಂಡರು.ಇದನ್ನೂ ಓದಿ: ಪ್ರಧಾನಿಯಾಗುವ ಅವಕಾಶವಿದೆ ಅಂದಿದ್ದಕ್ಕೆ ನಕ್ಕಿದ್ದರು – ಮಾಜಿ ಸಚಿವ ಎಂ.ಸಿ ನಾಣಯ್ಯ