ಬೆಂಗಳೂರು: ಜೆಡಿಎಸ್ ಬಂಡಾಯ ಶಾಸಕರಿಗೆ ಕಾಂಗ್ರೆಸ್ ಎಂಟ್ರಿ ಸಿಗುತ್ತಾ? ಇಲ್ವಾ? ಅನ್ನೋ ಗೊಂದಲ, ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಜೆಡಿಎಸ್‍ನ 7 ಮಂದಿ ರೆಬೆಲ್ ಶಾಸಕರು ಮಾರ್ಚ್ 24ರಂದು ಕಾಂಗ್ರೆಸ್ ಸೇರಲಿದ್ದಾರೆ.
Advertisement
ಚೆಲುವರಾಯಸ್ವಾಮಿ ಅವರೇ ಖುದ್ದು ಸಿಎಂ ಸಿದ್ದರಾಮಯ್ಯ ಅವರನ್ನ ಊಟಕ್ಕೆ ಆಹ್ವಾನಿಸಿದ್ರು. ಚಲುವರಾಯಸ್ವಾಮಿ ಅವರ ಜೆ.ಪಿ.ನಗರ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ ಊಟದ ಬಳಿಕ ರಾಜಕೀಯದ ಬಗ್ಗೆ ಲೋಕಾಭಿರಾಮವಾಗಿ ಬಂಡಾಯ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ. ಟಿಕೆಟ್ ಅಂತಿಮಗೊಳಿಸುವ ಹೊತ್ತಿನಲ್ಲಿ ಸಿಎಂ ಭೇಟಿ ಮಾಡಿ, ಹುರುಪು ತುಂಬಿದ್ದಾರೆ. ಮಾರ್ಚ್ 23 ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 24ರಂದು ಕಾಂಗ್ರೆಸ್ ಪಕ್ಷ ಸೇರುವಂತೆ ಸಿಎಂ ಎಲ್ಲರಿಗೂ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement
Advertisement
ಈ ಮೂಲಕ ಜಮೀರ್ ಅಹ್ಮದ್, ಚಲುವರಾಯಸ್ವಾಮಿ, ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಭೀಮಾನಾಯ್ಕ್, ಇಕ್ಬಾಲ್ ಅನ್ಸಾರಿ, ಅಖಂಡ ಶ್ರೀನಿವಾಸಮೂರ್ತಿಗೆ ಕಾಂಗ್ರೆಸ್ ದಾರಿ ಸುಗಮವಾದಂತಾಗಿದೆ. ಈ ನಡುವೆ ರಾಮನಗರದಲ್ಲಿ ಮಾತನಾಡಿದ ಶಾಸಕ ಹೆಚ್ ಸಿ ಬಾಲಕೃಷ್ಣ, ಇನ್ನು ಇದು ಕ್ಯಾಷುವಲ್ ಭೇಟಿ ಅಷ್ಟೇ, ಬೇರೇನಿಲ್ಲ. ತುಂಬಾ ದಿನಗಳಿಂದ ಚಲುವಣ್ಣ ಕರೆಯುತ್ತಿದ್ರು ರಾತ್ರಿ ಬಂದಿದ್ರು ಅಷ್ಟೇ ಅಂದ್ರು. ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇನ್ನೇನು ಸೇರ್ಪಡೆಯಾಗಬೇಕು, ಎಲ್ಲ ಸೇರ್ಪಡೆಯಾಗಿಯೇ ಇದ್ದೇವೆಲ್ಲ ಅಂತಾ ತಿಳಿಸಿದ್ರು.