ಬೈಯುವವರಿಗೂ ಸ್ವಾಗತ, ಹೊಗಳುವವರಿಗೂ ಸ್ವಾಗತ- ಪ್ರತಾಪ್ ಸಿಂಹ ಕಾಲೆಳೆದ ಸಿಎಂ

Public TV
1 Min Read
pratap simha cm siddaramaiah

ಮೈಸೂರು: ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ. ಬೈಯುವವರಿಗೂ ಸ್ವಾಗತ, ಹೊಗಳುವವರಿಗೂ ಸ್ವಾಗತ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಪ್ರತಾಪ್ ಸಿಂಹ (Pratap Simha) ಕಾಲೆಳೆದರು.

ಮೈಸೂರು ಕೆಡಿಪಿ ಸಭೆಯಲ್ಲಿ (KDP Meeting) ಮಾತನಾಡುತ್ತಾ ಘರ ವಾಪಸಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಮ್ಮ ಪಕ್ಷದಿಂದ ಹೋದವರು ಮಾತ್ರವಲ್ಲ. ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರಬೇಕು ಎಂದರು.

ರಾಜ್ಯದಲ್ಲಿ ಬಿಜೆಪಿ (BJP) ಎಲ್ಲಿದೆ ರೀ, ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗಿದೆ. ಇದುವರೆಗೂ ವಿಪಕ್ಷ ನಾಯಕನನ್ನೂ ಮಾಡಲು ಸಾಧ್ಯವಾಗಿಲ್ಲ. ಸರ್ಕಾರ ಬಂದು ನೂರು ದಿನ ಆಗಿದೆ ಎಂದ ಅವರು, ಪ್ರಧಾನಿ ಬಿಜೆಪಿ ನಾಯಕರನ್ನ ಭೇಟಿ ಮಾಡದ ವಿಚಾರದ ಕುರಿತು ಮಾತನಾಡಿ, ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಮೋದಿನೇ ಇವರನ್ನ ಭೇಟಿ ಬರಬೇಡಿ ಅಂದಿದ್ರಂತೆ ಎಂದು ತಿಳಿಸಿದರು. ಇದನ್ನೂ ಓದಿ: ಯುವತಿ ಪ್ರಕರಣ ವಾಪಸ್ ಪಡೆಯದ್ದಕ್ಕೆ ಆಕೆಯ ತಾಯಿಯನ್ನೇ ವಿವಸ್ತ್ರಗೊಳಿಸಿ ಥಳಿಸಿದ್ರು!

ರಾಜ್ಯದಲ್ಲಿ ಬರ ವಿಚಾರದ ಕುರಿತು ಮಾತನಾಡಿ, ಮೋಡ ಬಿತ್ತನೆ ಯಾವ ಕಾಲದಲ್ಲೂ ಯಶಸ್ವಿಯಾಗಿಲ್ಲ. ಮೋಡ ಬಿತ್ತನೆಯಿಂದ ಯಾವುದೇ ಪ್ರಯೋಜನ ಇಲ್ಲ. ಬರಕ್ಕೆ ಬೇಕಾದಂತಹ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಬರ ಪೀಡಿತ ಪ್ರದೇಶ ಘೋಷಣೆ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article