ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ (Electricity) ಕದ್ದ ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ?, ಕುಮಾರಸ್ವಾಮಿ ವಿದ್ಯುತ್ ಕದ್ದಿದ್ದು ಸತ್ಯ ತಾನೇ?, ದಂಡ ಕಟ್ಟಿದ್ದು ಸತ್ಯ ತಾನೇ. ಕದ್ದಿದ್ದನ್ನು ಕುಮಾರಸ್ವಾಮಿ ಒಪ್ಪಿಕೊಂಡಿದ್ದು ಸತ್ಯ ತಾನೇ. ಇಂತವರಿಂದ ನಾವು ಏನು ಕೇಳಿಸಿಕೊಳ್ಳಬೇಕು ಹೇಳಿ ಎಂದು ಗರಂ ಆದರು.
Advertisement
Advertisement
ಪದೇ ಪದೇ ಕುಮಾರಸ್ವಾಮಿ ವಿಚಾರದಲ್ಲಿ ನನಗೆ ಪ್ರತಿಕ್ರಿಯೆ ಕೊಡಲು ಇಷ್ಟ ಇಲ್ಲ. ಕುಮಾರಸ್ವಾಮಿ ಹತಾಶಾರಾಗಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಕಲೆಕ್ಷನ್ ಪ್ರಿನ್ಸ್ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ ವರ್ಗಾವಣೆಯಾಗಿದ್ದು ಹೇಗೆ – ಸಿಎಂಗೆ ಹೆಚ್‌ಡಿಕೆ ಪ್ರಶ್ನೆ
Advertisement
Advertisement
ಬಿಜೆಪಿಯಲ್ಲಿ ಏನ್ ಆಗುತ್ತದೆ ಎಂಬುದನ್ನ ಸ್ವಲ್ಪದಿನ ಕಾಯಿರಿ. ವೇಟ್ ಅಂಡ್ ಸೀ. ಅಸಮಾಧಾನ ಹೇಗೆ ಸ್ಫೋಟವಾಗುತ್ತೆ ಎಂಬುದು ನಿಮಗೆ ಗೊತ್ತಾಗುತ್ತದೆ. ಶುಕ್ರವಾರದ ಸಭೆಯಿಂದ ಯತ್ನಾಳ್, ಬೆಲ್ಲದ್, ಜಾರಕಿಹೊಳಿ ಯಾಕೆ ಎದ್ದು ಹೋದರು?. ಯಡಿಯೂರಪ್ಪ ಮಗನನ್ನ ಅಧ್ಯಕ್ಷ ಮಾಡಿರುವುದು, ಅಶೋಕನನ್ನ ವಿಪಕ್ಷ ನಾಯಕ ಮಾಡಿರುವುದು ಅವರಿಗೆ ಬೇಸರ ತಂದಿದೆ. ಸ್ವಲ್ಪ ದಿನ ನೀವೇ ಕಾದು ನೋಡಿ ಎಂದು ಹೇಳಿದರು.
ಇದೆ ವೇಳೆ ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಗರಂ ಆದ ಸಿಎಂ, ಈಗ ಯಾಕ್ರಿ ಚುನಾವಣೆ ನಡೆಯುತ್ತದೆ. ಈ ಹಿಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದರು. ಅಧಿಕಾರಕ್ಕೆ ಬಂದಿದ್ದು ಯಾರ್ರಿ? ಸುಮ್ಮನೆ ಏನೇನೂ ಹೇಳುತ್ತಾರೆ ಅದನ್ನೆಲ್ಲಾ ಬಿಟ್ಟು ಬಿಡಿ ಎಂದು ಸಿಎಂ ತಿಳಿಸಿದರು.