ಬೆಂಗಳೂರು: ಕಲಾಹಬ್ಬ 22ನೇ ಚಿತ್ರಸಂತೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಭಾನುವಾರ ಚಾಲನೆ ನೀಡಿದರು. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಲಕ್ಷಾಂತರ ಕಲಾಕೃತಿಗಳ ಪ್ರದರ್ಶನ ಮೂಲಕ ಕಲಾವಿದರು, ಕಲಾಸಕ್ತರು, ಕಲಾರಸಿಕರಿಗೆ ಚಿತ್ರಸಂತೆ (Chitra Santhe) ಕೈಬೀಸಿ ಕರೆಯುತ್ತಿದೆ.
ಈ ಬಾರಿ ಹೆಣ್ಣು ಮಗುವಿಗೆ ಚಿತ್ರಸಂತೆ ಸಮರ್ಪಿಸಲಾಗಿದೆ. ಚಿತ್ರಕಲಾ ಪರಿಷತ್‌ನ ಪ್ರವೇಶ ದ್ವಾರದಲ್ಲಿ 35 ಅಡಿ ಎತ್ತರದ ಕಲಾಕೃತಿ ನಿರ್ಮಿಸಲಾಗಿದೆ. ಬೆಳಗ್ಗೆ 6 ಕ್ಕೆ ಆರಂಭವಾಗಿರುವ ಚಿತ್ರಸಂತೆ ರಾತ್ರಿ 9 ರವರೆಗೂ ನಡೆಯಲಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಸಾವಿರಾರು ಕಲಾವಿದರು ತಮ್ಮ ಕಲಾ ಪ್ರತಿಭೆಯನ್ನು ಅರಳಿಸಿದ್ದಾರೆ. ಇದನ್ನೂ ಓದಿ: ಶಬರಿಮಲೆ ಯಾತ್ರೆಯಲ್ಲಿ ಮಸೀದಿ ಭೇಟಿ ಬೇಡ: ಬಿಜೆಪಿ ಶಾಸಕ ರಾಜಾ ಸಿಂಗ್
Advertisement
Advertisement
ಪೆನ್ಸಿಲ್ ಸ್ಕೆಚ್‌ನಿಂದ ಹಿಡಿದು ತೈಲವರ್ಣ, ಜಲವರ್ಣ, ಆಕ್ರೋಲಿಕ್, ಮೈಸೂರು ಶೈಲಿ, ರಾಜಸ್ಥಾನಿ ಶೈಲಿ, ಆಕ್ರೋಲಿಕ್, ಪಾರಂಪರಿಕ, ಆಧುನಿಕ ಪ್ರಕಾರಗಳ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಕನಿಷ್ಟ 100 ರೂ.ನಿಂದ ಮೂರ್ನಾಲ್ಕು ಲಕ್ಷ ರೂ. ವರೆಗೂ ಕಲಾಕೃತಿಗಳನ್ನು ಮಾರಾಟ ಮಾಡಲಾಗ್ತಿದೆ.
Advertisement
Advertisement
ಬೇರೆ ಬೇರೆಯ ರಾಜ್ಯಗಳ ಮೂರೂವರೆ ಸಾವಿರಕ್ಕೂ ಹೆಚ್ಚು ಕಲಾವಿದರು ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಬಾರಿ ನಾಲ್ಕು ಲಕ್ಷ ಕಲಾಸಕ್ತರ ಭೇಟಿ ನಿರೀಕ್ಷೆ ಮಾಡಲಾಗಿದೆ. ಇದನ್ನೂ ಓದಿ: ಇದು ಮೋಸದ ಸರ್ಕಾರ: ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ