ಬೆಂಗಳೂರು: ವಿಧಾನಸಭೆ ಎಲೆಕ್ಷನ್ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ ನೀಡುವುದು ಖಚಿತವಾಗಿದೆ.
ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ ಆರನೇ ವೇತನ ಆಯೋಗ ನೀಡಿರೋ ವರದಿಯನ್ನು ಯಥಾವತ್ತು ಜಾರಿಗೊಳಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜನವರಿ ಅಂತ್ಯಕ್ಕೆ ಆಯೋಗದ ಅವಧಿ ಕೊನೆಗೊಳ್ಳಲಿದೆ. ಅವಧಿ ಮುಗಿಯೋದಕ್ಕೂ ಮುನ್ನ ವರದಿ ಮಂಡನೆಯಾಗಲಿದೆ.
6 ನೇ ವೇತನ ಆಯೋಗದ ವರದಿಯನ್ನು ಜಾರಿಗೆ ತಂದು ಚುನಾವಣೆ ಎದುರಿಸಲು ನಿರ್ಧಾರ ಮಾಡಲಾಗಿದ್ದು, ಸರ್ಕಾರದ ಅವಧಿ ಮುಗಿಯೋ ಮುನ್ನ ಸಿದ್ದರಾಮಯ್ಯ ಕೊನೆಯ ಬ್ರಹ್ಮಸ್ತ್ರ ಬಿಡಲಿದ್ದಾರೆ.
ಈ ಮೂಲಕ 6 ಲಕ್ಷ ಸರ್ಕಾರಿ ನೌಕರರ ಕುಟುಂಬದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಸಲುವಾಗಿ ಫೆಬ್ರವರಿ 16ರಂದು ಮಂಡಿಸುವ ಬಜೆಟ್ ನಲ್ಲಿ ವೇತನ ಆಯೋಗದ ವರದಿ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಪಬ್ಲಿಕ್ ಟಿವಿಗೆ 6 ನೇ ವೇತನ ಆಯೋಗದ ಸಂಭವನೀಯ ವರದಿ ಸಿಕ್ಕಿದೆ. ಹಾಗಾದ್ರೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗೋ ಭರ್ಜರಿ ಉಡುಗೊರೆ ಏನು ಅಂತ ನೋಡೋದಾದ್ರೆ:
– ವಾರದಲ್ಲಿ 5 ದಿನ ಮಾತ್ರ ಕೆಲಸ, ಶನಿವಾರ, ಭಾನುವಾರ ರಜೆ.
– ಕೆಲ ಜಯಂತಿಗಳಿಗೆ ರಜೆ ರದ್ದು ಮಾಡಲು ಶಿಫಾರಸ್ಸು.
– ಕೆಲಸದ ಸಮಯದಲ್ಲಿ ಬದಲಾವಣೆ.
– ನೌಕರರ ವೇತನದಲ್ಲಿ ಭಾರಿ ಹೆಚ್ಚಳ.
– ಕೇಂದ್ರ ಸರ್ಕಾರಿ ನೌಕರರ ಹತ್ತಿರದ ಸಂಬಳಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಬಳ.
– ಕನಿಷ್ಠ ವೇತನ ಮೊತ್ತ 16,350 ರೂ.ಗೆ, ಗರಿಷ್ಠ ವೇತನ 1,32,925 ರೂ.ಗೆ ಏರಿಕೆ.
– ಗ್ರೂಪ್ ಡಿ – 16,350 ರೂ., ಗ್ರೂಪ್ ಸಿ – 19,850, ಎಫ್‍ಡಿಐ – 28,125 ರೂ.
– ಗ್ರೂಪ್ ಬಿ – 39,425 ರೂ., ಗ್ರೂಪ್ ಎ – 48,625 ರೂ., ಐಎಎಸ್ ಯೇತರ ಅಧಿಕಾರಿಗಳು-95,325 ರೂ.